ಶಾಲೆಯಲ್ಲಿ ಮೊದಲ ದಿನ
ಜೂನ್ ತಿಂಗಳ ಮೊದಲ ವಾರದಲ್ಲಿ ಶಾಲೆ ಶುರುವಾಗುತ್ತಿದ್ದ ದಿನಗಳು. ನನಗೆ ನೆನಪಿದ್ದಂತೆ ಆ ದಿನ ವಿಪರೀತ ಮಳೆ ಬರುತಿತ್ತು. ಮಾವನ ಕೈಯಲ್ಲಿ ಉದ್ದದ ಕೊಡೆ ಇತ್ತು. ನನ್ನ ಕೈ ಹಿಡಿದುಕೊಂಡು ಶಾಲೆಯ ಮುಖ್ಯೋಪದ್ಯಾಯರ ಕೊಟಡಿಗೆ ಕರೆದುಕೊಂಡು ಹೋದ ಮಾವ ನನಗೆ ಅರ್ಥವಾಗದ ಕನ್ನಡ ಭಾಷೆಯಲ್ಲಿ (ನನ್ನ ಮಾತ್ರ ಭಾಷೆ ತುಳು) ಮಾತನಾಡಿ ನನ್ನನ್ನು ಅವರ ಹತಿರ ಬಿಟ್ಟು ಹೋದರು.
ನಾನು ಸೇರಿದ ಶಾಲೆಯ ಹೆಸರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಾಪು. ಮಾವ ಶಾಲೆಯಲ್ಲಿ ನನ್ನನ್ನು ಬಿಟ್ಟು ಹೋದ ಮೇಲೆ ಮುಖ್ಯೋಪದ್ಯಾಯರು ಒಬ್ಬ ವಯಸ್ಸಾದ ಗಂಡಸಿನ ಜತೆ ನನ್ನನ್ನು ಕಳುಹಿಸಿದರು. ಬಹುಶ ಅವರು ಒಂದನೇ ತರಗತಿಯ ಅದ್ಯಾಪಕರಾಗಿರಬೇಕು. ಆ ಮಹನೀಯರು ನನ್ನನ್ನು ಒಂದು ಬೆಂಚಿನ ಮೇಲೆ ಕುಳ್ಳಿರಿಸಿ ಎದ್ದು ಕೊಂಡುಹೋದರು. ನನಗೆ ಅಳು ಒತ್ತರಿಸಿ ಬರುತಿತ್ತು. ಜೊತೆಗೆ ಜೋರಾದ ಮಳೆ. ಬೆಳಿಗ್ಗೆ ಅಮ್ಮ ಕೊಟ್ಟ ಗಂಜಿ ಎಲ್ಲಿಯೋ ಕರಗಿ ಹೋಗಿತ್ತು. ನನ್ನನ್ನು ಮೊದಲ ತರಗತಿಗೆ ಸೇರಿಸಿದ ದಿನವೇ ನನ್ನ ಅಣ್ಣನ್ದಿರಿಬ್ಬರನ್ನು ಅದೇ ಶಾಲೆಗೆ ಸೇರಿಸಿದ್ದರು. ಆದರೆ ಅವರ ತರಗತಿ ಎಲ್ಲಿ ಎನ್ನುವುದೋ ನನಗೆ ಗೊತ್ತಿರಲಿಲ್ಲ.
ನಾನು ಕುಳಿತ ಕೊನೆಯಲ್ಲಿ aksharashah ಯಾರು ಇರಲಿಲ್ಲ. ಬಹುಶ ೨ ಗಂಟೆಯ ನಂತರ ನನ್ನ ಚಿಕ್ಕಣ್ಣ ಅಲ್ಲಿಗೆ ನನ್ನನ್ನು ಹುಡುಕಿಕೊಂಡು ಬಂದ. ಅವನನ್ನು ನೋಡಿದ ಕೂಡಲೇ ನನಗೆ ಜೋರಾಗಿ ಅಳು ಬಂತು, ಅತ್ತುಬಿಟ್ಟೆ. ಅವನು ಕೇಳಿದ, "ಇಂಚಿನ ಅಂಡ್ ಉದಯ ಮಾಸ್ತರು ಕುತ್ತುಯೇರ?" ಹೊಡೆಯಲಿಕ್ಕೆ ಅಲ್ಲಿ ಯಾರಾದರು ಇದ್ದರೆ ತಾನೆ? ಆ ನಂತರ ಮನೆಗೆ ಹೊರಟೆವು. ಇನ್ನೊಬ್ಬ ಅಣ್ಣನ ಹತ್ತಿರ ಹೇಳಿದೆ ನನ್ನನ್ನು ಉಪ್ಪುಮೂಟೆ ಮಾಡುತ್ತಿಯ ಅಂತ. ಅವನಿಗೆ ಬಹಳ ಕುಶಿಯಾಯಿತು. ಆದರೆ ನನಗಿಂತ ಬಾರೆ ಎರಡು ವರ್ಷ ದೊಡ್ಡವರು ನನ್ನನ್ನು ಎಷ್ಟು ಅಂತ ಹೊತ್ತುಕೊಂಡು ಹೋಗಿಯರು. ಅಂತು ಮನೆಗೆ ಬಂದು ಅಮ್ಮ ನನ್ನ ತಲೆ ಸವರಿದಾಗ ಶಾಲೆ ಸೇರಿದ್ದು ಒಂದು ದೊಡ್ಡ ಯುದ್ದ ಜಯಿಸಿದಂತೆ ಅನಿಸಿತು.
ಶನಿವಾರ, ಆಗಸ್ಟ್ 13, 2011
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)