HINDU JUNIOR COLLEGE - REVINDING OF MEMORY
ಪ್ರಾಥಸ್ಮರಣೀಯರಾದ ಗುರುವರ್ಯರೆಲ್ಲರಿಗೂ ಅನಂತಾನಂತ ವಂದನೆಗಳು.
ಪ್ರೌಢ ಶಾಲಾ ಗುರುಗಳಾದ - ಅಂತೋನಿ ನಜರತ್, ಪ್ರಭಾಕರ್, ಶಂಕರ್ ಭಟ್, ಶ್ಯಾಮ ಭಟ್, ವರದರಾಯ ನಾಯಕ್, ಸದಾನಂದ ಪ್ರಭು, ವಸಂತಿ ಟೀಚರ್, ವತ್ಸಲಾ ಟೀಚರ್, ಶಾಂತ ಟೀಚರ್, ಶಕೀಲಾ ಮೇಡಂ, ಸುಧಾಮ ಶೆಟ್ರು, ಗೋಪಾಲಕ್ರಷ್ಣ ಭಟ್, ಪಾಂಡುರಂಗ ಹೆಗ್ಡೆ, ಈಶ್ವರ ಜೋಯ್ಸ, ಸರ್ವೋತ್ತಮ ಆಚಾರ್, ಕಾವಾಚಾರ್ಯ, ಜಯರಾಮ್ ಶೆಟ್ರು.
ಜೂನಿಯರ್ ಕಾಲೇಜಿನ ಉಪನ್ಯಾಸಕರುಗಳು - ಗಣಪತಿ ಭಟ್, ಮಾರ್ಕಂಡೇ, ಮಲ್ಲಿಕಾರ್ಜುನ್, ವಿಷ್ಣು ಭಟ್, ವಾಸುದೇವ ಸರ್, ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿದಂತಹ ಹೆಮ್ಮೆಯ ಬಾಲಸುಬ್ರಮಣ್ಯಂ ಸರ್, ವಾಣಿಜ್ಯ ಮತ್ತು ಲೆಕ್ಕಶಾಸ್ತ್ರದಲ್ಲಿ ಭದ್ರವಾದ ಬುನಾದಿ ಹಾಕಿಕೊಟ್ಟ ನಮ್ಮ ಹೆಮ್ಮೆಯ ರಾಜಗೋಪಾಲ ಸರ್.
ಬೋಧಕೇತರ ಸಿಬ್ಬಂದಿ ವರ್ಗ: ಮಹಾಬಲ ಶೆಟ್ಟಿ, ರಘುರಾಮ ಹೆಗ್ಡೆ, ಹರಿದಾಸ್ ಭಟ್, ಹೊನ್ನಯ್ಯ ಶೆಟ್ಟಿಗಾರ್, ವಿಮಲಾ ಮೇಡಂ, ಸುಂದರ ಶೆಟ್ಟಿ, ರಾಮಮೋಹನ್, ಪುತ್ತು, ಅಚ್ಚು, ದೇಜು, ನಾಗರಾಜ್, ರಮೇಶ್
ಸುಂದರವಾದ ಪರಿಸರದಲ್ಲಿ ವನಸುಮಗಳಂತೆ ಸ್ವಚ್ಛಂದವಾಗಿ ಯಾವುದೇ ಒತ್ತಡ ಇಲ್ಲದೆ ಓದಿದ ನಮ್ಮಶಾಲಾ ದಿನಗಳು ಇಂದಿನ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಮಧುರವಾದ ದಿನಗಳು. ಶಾಲೆ ಒಂದು ದೇಗುಲದಂತೆ. ನಾವೆಲ್ಲರೂ ಅಲ್ಲಿಗೆ ತೆರಳಿದ ಶರಣಾರ್ಥಿಗಳು. ಭಕುತಿಗೆ ತಕ್ಕಂತೆ ನಮ್ಮಲ್ಲಿನ ಪಾತ್ರೆಯ ಅಳತೆಗೆ ಅನುಗುಣವಾಗಿ ದೊರೆತ ಪ್ರಸಾದದಲ್ಲಿ ಜೀವನ ಕಟ್ಟಿಕೊಂಡ ನಾವೆಲ್ಲಾ ಭಾಗ್ಯವಂತರು.
ಜೀವನ ಒಂದು ಶಾಲೆ, ನಾನೊಬ್ಬ ವಿದ್ಯಾರ್ಥಿ.
ವಿದ್ಯಾವರ್ಧಕ ಸಂಘದ ಹಿಂದೂ ಪದವಿ ಪೂರ್ವ ಶಿಕ್ಷಣ - ೧೯೮೭ - ೧೯೯೨, ಅದೇ ರೀತಿ ೧೯೯೨ - ೧೯೯೫ ಪದವಿ, ಬಳಿಕ ನಮ್ಮ ಕರೆಸ್ಪಾಂಡೆಂಟ್ ರಾಜಾರಾಮ ಶೆಟ್ರ ಜೊತೆ ಮೂರು ವರ್ಷದ ಅರ್ಟಿಕಲ್ ಶಿಪ್.
ಕೆಲವೊಂದು ಮಧುರ ನೆನಪುಗಳು, NCC ಕ್ಯಾಂಪ್, ಸೂಡ ಷಷ್ಠಿಯಲ್ಲಿ CROWD ಕಂಟ್ರೋಲ್ , ವ್ಯಕ್ತಿತ್ವ ವಿಕಸನ ಶಿಬಿರಗಳು. ಶಾಲಾ ಕ್ರೀಡಾಕೂಟ ಮತ್ತು ವಾರ್ಷಿಕೋತ್ಸವಗಳು.
ಪುನರಪಿ ಈ ಸವಿ ನೆನಪುಗಳನ್ನು ಮತ್ತು ಅದರೊಟ್ಟಿಗೆ ನಮ್ಮ ಇಂದಿನ ಮತ್ತು ಮುಂದಿನ ಪೀಳೆಗೆಯ ವಿದ್ಯಾರ್ಥಿಗಳಿಗೆ ಕೊಡುಗೆ ಕೊಡಬೇಕೆಂದು ಪ್ರಯತ್ನ ಮಾಡುತ್ತಿರುವ ನಿಮ್ಮೆಲ್ಲರಿಗೂ ಶುಭ ಹಾರೈಕೆಗಳು.
ಉದಯ್
(1987 to 1992)