ಮಂಗಳವಾರ, ಸೆಪ್ಟೆಂಬರ್ 29, 2015

ಫ಼ತೆಫ಼ುರ್ ಸಿಕ್ರೀ

ಆಗ್ರಾ ದಿಂದ ಮುಂಜಾನೆ ಉಪಹಾರ ಸೇವಿಸಿ ನಮ್ಮ ಪಯಣ ಫ಼ತೆಫ಼ುರ್ ಸಿಕ್ರೀ ಯಾ ಕಡೆಗೆ.  ಸುಮಾರು ೩೦ ನಿಮಿಷದ ಪ್ರಯಾಣದ ನಂತರ ಅಕ್ಬರನ ಕನಸಿನ ನಗರಕ್ಕೆ ಬೇಟಿ ನೀಡಿದೆವು.
೧. ಬುಲಂದ್ ದರ್ವಾಜಾ
೨. ಜಾಮಾ ಮಸೀದಿ
೩. ಸಲಿಂ ಚಿಸ್ತಿ ಸಮಾದಿ
೪.  ದಿವಾನ್ ಎ ಆಮ್ ಮತ್ತು ದಿವಾನ್ ಎ ಖಾಸ್  (ಎರಡು ದರಬಾರ್ ಹಾಲ್ ಗಳು)
೫.  ಪಂಚ ಮಹಲ್
೬. ಬೀರಬಲ್ಲನ ಮಹಲ್

ಇದಲ್ಲದೆ ರಾಣಿಯರ ಮಹಲ್ - ಇಲ್ಲಿನ ಕಟ್ಟಡಗಳನ್ನು ರಜಪೂತ ಶ್ಯಲಿಯಲ್ಲಿ ಕಟ್ಟಲಾಗಿದೆ.

ಸಲಿಂ ಚಿಸ್ತಿ ಸಮಾದಿಗೆ ಪಾದರಕ್ಷೆಯ ಜತೆಗೆ ಪ್ರವೇಶ ನಿಷೇದಿಸಲಾಗಿದೆ. ಹೂವು ಚಾದರ್ ಹಾಕಿದರೆ ನಮ್ಮ ಮನಸ್ಸಿನ ಅಭಿಲಾಷೆ ಈಡೇರುತ್ತದೆ ಎಂದು ಅಲ್ಲಿನ ಜನ ಕರೆಯುತ್ತಿದ್ದರು.

ಹೂ ಮತ್ತು ಚಾದರ್ ಮಾರುವವರು - ಖುದಾ ನಿಗೆ ನಿಮ್ಮ ಬಕುತಿಯನ್ನು ನಿವೇದಿಸಲು ಹೂವು ಚಾದರ್ ಹಾಕಲೇ ಬೇಕು.
ಬರೇ ಸುತ್ತು ಬಂದರೆ ಏನೂ ಪ್ರಯೋಜನ ಇಲ್ಲ ಎಂದು ನಮ್ಮನ್ನು ಮನೋ ವ್ಯಥೆಗೆ ದೂಡುವ ಪ್ರಯತ್ನ ಮಾಡುತ್ತಿದ್ದರು ನಮ್ಮ ನಿರ್ದರ ಕೇವಲ ವೀಕ್ಷಣೆ ಮಾತ್ರ ಆಗಿದ್ದ ಕಾರಣ ನಾವು ಅವರ ಮಾತಿಗೆ ಮರುಳಾಗಲಿಲ್ಲ.

ದೇವರ ಪೂಜೆ ಅಥವಾ ಸೇವೆ ನಮ್ಮ ಸ್ವಂತ ಅಂತರಾತ್ಮದಿಂದ ಬರಬೇಕು ಇನ್ನೊಬ್ಬರ ದೌರ್ಬಲ್ಯವನ್ನು ಉಪಯೋಗಿಸಿ ಮಾಡಿಸಿದರೆ ಏನು ಪ್ರಯೋಜನ?

ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಸ್ಪಷ್ಟವಾಗಿ ಹೇಳಿದ್ದಾನೆ -
ಅಶ್ರದ್ಧಯಾ ಹುತಂ ದತ್ತಂ ತಪಸ್ತಪ್ತಂ ಕೃತಂ ಚ ಯತ್
ಅಸದಿತ್ಯುಚ್ಯತೇ ಪಾರ್ಥ ನಚ ತತ್ ಪ್ರೇತ್ಯ ನೋ ಇಹ
 
ಅರ್ಜುನ, ದೇವರಲ್ಲಿ, ದೇವರ ವಾಕ್ಯಗಳಾದ ವೇದಗಳಲ್ಲಿ, ಋಷಿಮುನಿಗಳ ಆದೇಶಗಳಲ್ಲಿ ಶ್ರದ್ಧೆಯಿಲ್ಲದೇ ಮಾಡಿದ ಹೋಮ, ಕೊಟ್ಟ ದಾನ, ಆಚರಿಸಿದ ತಪಸ್ಸು, ಮಾಡುವ ಯಾವದೇ ಕರ್ಮ ಸತ್ಕರ್ಮ ಎಂದು ಕರೆಸಿಕೊಳ್ಳುವದಿಲ್ಲ. ಬದಲಾಗಿ, ಅಸತ್ ಇತ್ಯುಚ್ಯತೇ, ಅಸತ್ಕರ್ಮ ಎಂದು ಕರೆಸಿಕೊಳ್ಳುತ್ತದೆ. ಆದರಿಂದ ಈ ಲೋಕದಲ್ಲಿಯೂ ಸತ್ಫಲ ಉಂಟಾಗುವುದಿಲ್ಲ. ಆ ಲೋಕದಲ್ಲಿಯೂ ಸತ್ಫಲ ಉಂಟಾಗುವದಿಲ್ಲ. ಕೇವಲ ದುಷ್ಫಲವೇ.

ಅಲ್ಲಿಂದ ಹೊರಟವರು ಜೈಪುರಕ್ಕೆ ಹೋಗುವ ದಾರಿಯಲ್ಲಿ ಒಂದು ಸುಂದರವಾದ ಕೋಟೆಯಂತಹ ಹೋಟೆಲಿನಲ್ಲಿ ಮದ್ಯಾನದ ಭೋಜನ ವನ್ನು ಸವಿದು ಜೈಪುರ್ ತಲುಪಬೇಕಾದರೆ ಸುಮಾರು ೩.೩೦ ಗಂಟೆಯಾಗಿತ್ತು.

ಜೈಪುರ್ ದಲ್ಲಿ ಮೊದಲಿಗೆ ಬಿರ್ಲಾ ಮಂದಿರಕ್ಕೆ ಬೇಟಿ ನೀಡಿದೆವು.  ಅಮ್ರತಶಿಲೆ ಯಲ್ಲಿ ನಿರ್ಮಿಸಿದ ಸುಂದರವಾದ ಮಂದಿರ. ಫೋಟೋ ಸೆಶನ್ ಎಲ್ಲ ಮುಗಿಸಿ ನಮ್ಮ ನಿಗದಿ ಪಡಿಸಿದ ಹೋಟೆಲಗೆ ತೆರಳಿ ಸ್ವಲ್ಪ ವಿಶ್ರಾಂತಿ ಪಡೆದು ನಂತರ ರಾತ್ರಿಯ ಊಟಕ್ಕೆ ಅಲ್ಲಿಯೇ ಚೌಕಿ ದಾನಿ ಎಂಬ ಹೋಟೆಲ್/ವಿಶ್ರಂತಿಧಾಮಕ್ಕೆ ತೆರಲಿದೆವು.




 

ಶನಿವಾರ, ಸೆಪ್ಟೆಂಬರ್ 12, 2015

ಮಥುರ - ಗೋಕುಲ ದಿಂದ ತಾಜ್ ಮಹಲ್ ನೆಡೆಗೆ

ಮೂರನೆಯ ದಿನ ಬೆಳಿಗ್ಗೆ ಬ್ರಂದಾವನ ದಿಂದ ಮಥುರೆಯ ಕಡೆಗೆ ಹೊರೆಟೆವು. ಮಥುರೆಯಲ್ಲಿ ನಮ್ಮ ಸಾರಥಿ ಸ್ವಲ್ಪ ದೂರ ನಮ್ಮ ವಾಹನವನ್ನು ನಿಲ್ಲಿಸಿ ನೀವು ಇಲ್ಲಿಂದ ನಡೆದುಕೊಂಡು ಹೋಗಬೇಕಾಗುತ್ತದೆ ಎಂದು ತಿಳಿಸಿದ, ನಮ್ಮದು ಪ್ರವಾಸಿ ವಾಹನವಾದ್ದರಿಂದ ಬಕ ಪಕ್ಷಿಗಳಂತೆ ಕಾಯುತ್ತಿದ್ದ ಒಬ್ಬ ದಾರ್ಶನಿಕ (guide) "ಸರ್ ನಾನು ನಿಮಗೆ ಬಹಳ ಹತ್ತಿರದ ದಾರಿ ತೋರಿಸುತ್ತೇನೆ ಜತೆಗೆ ಕ್ಷೇತ್ರದ ವಿಶೇಷತೆಯನ್ನು ತಿಳಿಸುತ್ತೇನೆ" ಎಂದು ಕರೆದ.

ನಮಗೆ ಹೇಗೂ ನಡೆಯಲಿಕ್ಕೆ  ಅರ್ದ ಮನಸ್ಸು - ಜತೆಗೆ ಅಲ್ಲಿನ ವಿಶೇಷತೆಯನ್ನು ತಿಳಿಯುವ ಕುತೂಹಲ ಇದ್ದದ್ದರಿಂದ , ಗೈಡ್ ಹೇಳಿದ್ದು ತೂಕಡಿಸುವವನಿಗೆ ಹಾಸಿಗೆ ಹಾಸಿ ಕೊಟ್ಟಂತೆ ಆಯಿತು. ಮಥುರೆಯಲ್ಲಿ ಕಂಸ, ವಸುದೇವ - ದೇವಕಿಯರನ್ನು ಬಂದನ ದಲ್ಲಿಟ್ಟ ಸೆರೆಮನೆ, (ಕೃಷ್ಣನ ಜನ್ಮ ಸ್ತಳ) ಮತ್ತು ಹೊಸದಾಗಿ ಕಟ್ಟಿಸಿದ ಕೃಷ್ಣನ ದೇವಾಲಯ ದರ್ಶನ ಮಾಡಿದೆವು.
ಸೆರೆಮನೆಯಿಂದ ಯಮುನೆಯ ಮಾರ್ಗವಾಗಿ ವಸುದೇವ ಕೃಷ್ಣನನ್ನು ತಲೆಯ ಮೇಲೆ ಹೊತ್ತುಕೊಂಡು ನಡೆದ ಸ್ತಳದಲ್ಲಿ ಒಂದು ಮಸಿದಿ ಇದೆ. ಹಾಗಾಗಿ ಅಲ್ಲಿನ ಮೂಲ ದೇವಾಲಯ ಮಸಿದಿಯಾಗಿ ಮುಘಲ್ ಸುಲ್ತಾನರ ಕಾಲದಲ್ಲಿ ಪರಿವರ್ತಿಸಲಾಗಿದೆ

ಹೊಸ ದೇವಾಲಯ ಭವ್ಯವಾಗಿದೆ. ಅಲ್ಲಿನ ಪ್ರತಿಯೊಂದು ಕಲ್ಲಿನಲ್ಲಿಯೂ ಜನರ ಹೆಸರನ್ನು ಕೆತ್ತಿಸಲಾಗಿದೆ, ಹೆಚ್ಚು ದೊಡ್ಡ ಕೊಟ್ಟವರನ್ನು ದೊಡ್ಡ ಶಿಲೆಯಲ್ಲಿ ಹೆಸರಿಸಲಾಗಿದ್ದರೆ ಸ್ವಲ್ಪ ಕಡಿಮೆ ಕೊಟ್ಟವರ ಹೆಸರು ಚಿಕ್ಕ ಕಲ್ಲಿನಲ್ಲಿ ಕೆತ್ತಿದ್ದಾರೆ. (ಜನರ ಮೌಡ್ಯ ಮತ್ತು ಮುಗ್ದ ಭಕ್ತಿಯನ್ನು ಶೋಷಿಸುವವರು - ಎಲ್ಲಾ ಕಾಲದಲ್ಲಿಯೂ ಮತ್ತು ಎಲ್ಲ ಧರ್ಮದಲ್ಲಿಯೂ ಕಾಣಸಿಗುತ್ತಾರೆ. ನಾನು ಇದಕ್ಕೆ ಹೊರತಾಗಲಿಲ್ಲ)

ಅಲ್ಲಿಂದ ಗೋಕುಲಕ್ಕೆ ನಮ್ಮನ್ನು ಗೈಡ್ ಕರೆದುಕೊಂಡು ಹೋದ. ಗೋಕುಲ ಮುಟ್ಟುತ್ತಲೇ ಜೋರು ಜೋರಾಗಿ ಮಳೆ ಬರಲು ಆರಂಬವಾಯಿತು. ಯಮುನೆಯ ನೀರನ್ನು ಮುಟ್ಟಬೇಕೆನ್ನುವ ನನ್ನವಳ ಆಸೆಗೆ ಮಳೆ ಪರೋಕ್ಷವಾಗಿ ಸಹಕರಿಸಿತು, ನಮ್ಮನ್ನು ಒದ್ದೆಮುದ್ದೆ ಮಾಡಿದ ಮಳೆ ನೀರು ಸೇರುವುದು ಯಮುನೆಯನ್ನೇ ತಾನೇ!

ಗೋಕುಲದಲ್ಲಿ ಕೃಷ್ಣನ ದೇವಾಲಯದಲ್ಲಿಯೇ  ಅಲ್ಲಿನ ಅರ್ಚಕರು ನಮ್ಮ ಕೈಗೆ ಮುದ್ದುಕೃಷ್ಣನ ಪುಟ್ಟ ತೊಟ್ಟಿಲಿನ ತೂಗುವ ದಾರವನ್ನು ಕೊಟ್ಟು ದೇವರ ಹೆಸರಲ್ಲಿ ನೀವು ಯಾವ ಪೂಜೆ ಬರೆಯುತ್ತೀರಿ? ಎಂದು ಧರ್ಮ ಸಂಕಟ ದ ಪ್ರಶ್ನೆಗೆ ಸಿಲುಕಿಸಿದ್ದು. ಜತೆಗೆ "ಕೋಇ ಪರೆಶನಿ  ಹೇ ಕ್ಯಾ?" ಎನ್ನುವ ಕೊಂಕು, ಏನೋ ಒಂದು ಚಿಕ್ಕ ಪೂಜೆಯೋ, ಸೇವೆಯನ್ನು ಬರೆಸಿದೆವು.


ಗೋಕುಲದಿಂದ ಆಗ್ರಾಕ್ಕೆ ಹೋಗಿ ತಲುಪಬೇಕಾದರೆ ಮದ್ಯಾನ್ನವಾಗಿತ್ತು, ಅಲ್ಲಿ ಊಟವನ್ನು ಮುಗಿಸಿ "TAJMAHAL" ನೋಡಲಿಕ್ಕೆ ಹೊರಟೆವು.

ಇತಿಹಾಸದ ಪುಟಗಳಲ್ಲಿ ಪ್ರೆಮಸೌದವಾಗಿ ಸೇರ್ಪಡೆಗೊಂಡ ತಾಜ್ ಮಹಲ್ -ಬಿಳಿಯ ಶಿಲೆಯಿಂದ ನಿರ್ಮಿತವಾದ ಭವ್ಯ ಮಹಲ್ .  ಷಹಜಹಾನ್ ತನ್ನ ಪ್ರೀತಿಯ ಹೆಂಡತಿ ಮುಮ್ತಾಜ್ ಗಾಗಿ ಕಟ್ಟಿಸಿದ್ದು ಎಂದು ನಾವು ಚರಿತ್ರೆಯಲ್ಲಿ ಓದಿ ತಿಳಿದಿದ್ದು. ನಮ್ಮ ಗೈಡ್ ಇದನ್ನೇ ತಿಳಿಸುತ್ತಿದ್ದ, ಕೆಲವೊಂದು ಸ್ಮರಣಿಯ ಛಾಯಾಚಿತ್ರ ತೆಗೆಸಿಕೊಂಡೆವು.  ಕೆಲವೊಂದು ಕಡೆಯಲ್ಲಿ ದೇವಾಲಯದ ರೀತಿಯ ಕೆತ್ತನೆಗಳನ್ನು ಕಾಣಬಹುದು.

ಅಲ್ಲಿಂದ ಆಗ್ರಾದ ಕೋಟೆಗೆ ಒಳದಾರಿಯಲ್ಲಿ ಹೋಗುವ ವ್ಯವಸ್ತೆ ಇದೆ, ಆಗ್ರಾ ದ ಕೆಂಪುಕೋಟೆ - ದೆಹಲಿಯ ಕೆಂಪು ಕೋಟೆಯ ಮಾದರಿಯಲ್ಲಿಯೇ ಇದೆ.  ತಾಜ್ ಮಹಲ್ ಕಾಣುವಂತೆ ಷಹಜಾನ್ - ತನ್ನ ಕೊನೆಯ ದಿನಗಳನ್ನು ಗ್ರಹಬಂದನದಲ್ಲಿ ಕಳೆದ ಕೋಣೆ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ.

ರಾತ್ರಿ ಆಗ್ರಾದಲ್ಲಿ ನಮ್ಮ ವಿಶ್ರಾಂತಿ. ಆಗ್ರಾ ಹೋಟಲ್ ನ ವಾಚ್ ಮ್ಯಾನ್ ಮೀಸೆ ನೋಡಲಿಕ್ಕೆ ಯಕ್ಷಗಾನದಲ್ಲಿನ ಭೀಮಸೆನನಂತೆ ಗಿರಿಜಾ ಮೀಸೆ ಯಾಗಿತ್ತು. ಆ ಗಿರಿಜಾ ಮೀಸೆಯ ಮನುಷ್ಯ ವಿನಮ್ರನಾಗಿ ನಮಸ್ತೆ ಹೇಳುವ ರೀತಿ ನೋಡಿದರೆ - ಮನುಷ್ಯನ ಆಕಾರ ಮತ್ತು ಪರಿಸ್ತಿತಿ ಒಂದಕ್ಕೊಂದು ಯಾವ ರೀತಿ ವಿರುದ್ದವಾಗಿ ಇರುತ್ತದೆ ಎಂದು ಮನಸ್ಸಿಗೆ ತೋರಿತು



 

ಬುಧವಾರ, ಸೆಪ್ಟೆಂಬರ್ 9, 2015

ಬ್ರಂದಾವನ ಮತ್ತು ಮಥುರ ಕೃಷ್ಣ ನ ದರುಶನಕ್ಕೆ

ಬೆಳಿಗ್ಗೆ ಎದ್ದವರೇ ನಮ್ಮ ಗಾಡಿ ಮುಂದಿನ ತಾಣದ ಕಡೆಗೆ ಹೊರಟಿತು. ಅಂದ ಹಾಗೆ ದೆಹಲಿಯನ್ನು ಬಿಟ್ಟು ಹರ್ಯಾಣ ಮಾರ್ಗವಾಗಿ ಉತ್ತರ ಪ್ರದೇಶಕ್ಕೆ ನಾವು ಸಾಗಿದೆವು.  ಉತ್ತರ ಪ್ರದೇಶ ದಲ್ಲಿ ಪ್ರವಾಸಿ ವಾಹನ ದವರು ಪ್ರತಿ ದಿನಕ್ಕೆ ರಾಜ್ಯದ ವಾಹನ ತೆರಿಗೆ ಕಟ್ಟಬೇಕು.

ನಮ್ಮ ಚಾಲಕ ಉತ್ತರ ಪ್ರದೇಶ ಪ್ರವೇಶಿಸುವ ಸಂದರ್ಭದಲ್ಲಿ ಅಲ್ಲಿನ ವಾಹನ ತೆರಿಗೆಗಾಗಿ ಒಂದು ಕಡೆ ಸ್ವಲ್ಪ ಹೊತ್ತು ವಾಹನ ನಿಲುಗಡೆ ಮಾಡಿದ. ದಾರಿಯುದ್ದಕ್ಕೂ ಅಲ್ಲಲ್ಲಿ ಜನರು ಸಣ್ಣ ಸಣ್ಣ ಗುಂಪುಗಳಲ್ಲಿ ಗಂಗಾ ತೀರ್ಥವನ್ನು ಸುಂದರವಾಗಿ ಅಲಂಕೃತ ಕಮಾನಿನ ತರಹದ ದಂಡುನಲ್ಲಿ  ಹಿಡಿದುಕೊಂಡು ಸಾಗುತಿದ್ದರು.  ಮೊದಲು ನಾನು ನಮ್ಮ ಊರಿನಲ್ಲಿ ಬಂಜಾರ (ಹಕ್ಕಿ ಪಿಕ್ಕಿಗಳವರು) ಜನಗಳು ಈ ತರಹದ ಒಂದು ವೇಷಭೂಷಣ ಹಾಕಿಕೊಂಡು ಹೊಗುವುದನ್ನು ನೋಡಿದ್ದೆ. ಹಾಗಾಗಿ ನಮ್ಮ ಮಾರ್ಗದರ್ಶಕ (ಕಾಂತಪ್ರಸಾದ) ರಲ್ಲಿ ಏನೆಂದು ವಿಚಾರಿಸಿದಾಗ ಅವರು ಗಂಗೆಯಾ ಮಹತ್ವ ಮತ್ತು ಜನರ ನಂಬಿಕೆಯ ಬಗ್ಗೆ ತಿಳಿಸಿದರು. ಆಗ ಸ್ಮಿತಾ ಮೆಲ್ಲಗೆ "ನನಗೆ ಇದು ಮೊದಲೇ ಗೊತ್ತಿತ್ತು" ಎಂದಳು. ಅವಳು ಈ ಮೊದಲು ತನ್ನ ಹೆತ್ತವರ ಜತೆಗೆ ದೆಹಲಿ ದರ್ಶನಕ್ಕೆ ಬಂದಿದ್ದಳಂತೆ.

ಬ್ರಂದಾವನಕ್ಕೆ ತಿರುಗುವ ಮಾರ್ಗದಲ್ಲಿ ಒಂದು ಎತ್ತರವಾದ ದೇವಿಯ ಮಂದಿರವನ್ನು ನಿರ್ಮಾಣ ಮಾಡಿದ್ದಾರೆ. ವೈಷ್ಣೋ ದೇವಿ ಯಾ ದೇವಾಲಯ. ದೇವರ ದರುಶನ ಮಾಡಿದೆವು. ಅಲ್ಲಿನ ವಿಶೇಷ ಎಂದರೆ ಗುಹೆಯ ಮೂಲಕ ಮಹಾದೇವಿಯ ಅವತಾರಗಳ ದರ್ಶನ. ನೀರು ಹರಿಯುವ ಶಬ್ದ ಜತೆಗೆ ತುಸು ಕತ್ತಲೆ, ಹೊನಲು ಬೆಳಕಿನ ತರಹದ ದೀಪಗಳು, ಅಲ್ಲಿನ ಇಂಪಾದ ಸಂಗೀತ ಭಕ್ತಿ ಹೆಚ್ಚಿಸುತಿತ್ತು. ಇತ್ತೀಚಿಗೆ ನಿರ್ಮಿಸಲಾದ ದೇವಾಲಯ ಇದಾಗಿದ್ದು, ತುಂಬಾ ಮನಸ್ಸಿಗೆ ಮುದ ನೀಡುತ್ತದೆ.
ನಾವು ಮದ್ಯಾನ್ಹದ ಭೋಜನ ವನ್ನು "ಕ್ರೀಡಾ ರೆಸಿಡೆನ್ಸಿ" ಹೋಟೆಲ್ ನಲ್ಲಿ ಮಾಡಿ ಸ್ವಲ್ಪ ವಿಶ್ರಮಿಸಿ ಬ್ರಂದಾವನದ ಮಂದಿರಗಳ ದರ್ಶನಕ್ಕೆ ಹೊರಟೆವು.
  • ರಂಗನಾಥ ದೇವಾಲಯ 
  • ಬಂಕಿ ಬಿಹಾರಿ ಮಂದಿರ 
  • ವಿಷ್ಣುವಿನ ದೇವಾಲಯ
  • ಪ್ರೇಮ ಮಂದಿರ 
  • ಹನುಮಾನ್ ಮಂದಿರ 
ಈ ದೇವಾಲಯಗಳನ್ನು ಸಂದರ್ಶಸಿದೆವು. ಈ ಮಂದಿರಗಳಲ್ಲದೆ ಇನ್ನೂ ಹತ್ತು ಹಲವಾರು ದೇವಾಲಯಗಳು ಅಲ್ಲಿನ ಸುತ್ತು ಮುತ್ತಲಲ್ಲಿ ಇವೆ. ಉಳಿದಂತೆ ಬಿರ್ಲಾ ಮಂದಿರ, ಇಸ್ಕಾನ್ ಮಂದಿರ ಪ್ರಮುಖವಾದವುಗಳು.

"ಬ್ರಂದಾವನ ದಲ್ಲಿ ಮಂಗಗಳಿದ್ದಾವೆ,
ಮಂಗಗಳಂತೆ ಬೆನ್ನ ಹಿಂದೆ ಬರುವ ಮಕ್ಕಳಿದ್ದಾರೆ,
ಮತ್ತೆ ಬೇತಾಳ ಗಳಂತೆ ಬೆಂಬಿಡದ ಮಾರ್ಗದರ್ಶಕರಿದ್ದಾರೆ
ಅಲ್ಲಲ್ಲಿ ಕಸ ಎಸೆಯುವ ಯಾತ್ರಿಕರಿದ್ದಾರೆ.
ಪ್ರೇಮ ಸುಧೆಯನ್ನು ಹರಿಸಿದ ಶ್ಯಾಮಸುಂದರ ಕೃಷ್ಣನ  ನಾಡಿಗೆ ಸ್ವಾಗತ ಸುಸ್ವಾಗತ"

ಮಾರ್ಗದರ್ಶನ  (ಗೈಡ್) ಮಾಡುತ್ತೇವೆ ಎಂದು ಬೆಂಬಿಡದ ಜನರಿಂದ ತಪ್ಪಿಸಿಕೊಂಡು ಅಲ್ಲಿಯೇ ಓರ್ವ ವ್ರದ್ದೆಯ ಕೈಯಲ್ಲಿ ಅಲ್ಲಿನ ಮಾರ್ಗಸೂಚಿ ಪುಸ್ತಕ ಖರಿದಿಸಿ ಮೇಲೆ ಬರೆದ ಮಂದಿರಗಳನ್ನು ಸಂದರ್ಶಿಸಿದೆವು. 
ಮಂಗಗಳು ಕೈಯಲ್ಲಿ ಇರುವ ವಸ್ತುಗಳನ್ನು ಕಿತ್ತುಕೊಂಡು ಓಡುತ್ತವೆ ಎಂದು ಅಲ್ಲಿನ ಕೆಲವೊಂದು ಜನ ತಿಳಿಸಿದ್ದರು.  ನಾವು ನೋಡುತ್ತಿರುವಂತೆಯೇ ಒಂದು ಗಡವ ಮಂಗ ಅಭಿಮಾನ್ ನ ಕನ್ನಡಕ  (specs) ಕಿತ್ತುಕೊಂಡು ಮನೆಯೊಂದರ ಮೇಲಕ್ಕೆ ಹಾರಿತು. ನನಗೆ ಏನು ಮಾಡಬೇಕು ಎಂದು ಗೊತ್ತಾಗಲಿಲ್ಲ. ಅಲ್ಲಿನ ಒಂದು ಅಂಗಡಿಯವ ನಮ್ಮ ಸಹಾಯಕ್ಕೆ ಬಂದ. ಆ ಮಂಗನಿಗೆ ಒಂದು ಕಡಲೆ ಪೊಟ್ಟಣ ತೋರಿಸಿ ಎಸೆದ ಮಂಗ ಅ ಪೊಟ್ಟಣ ಕ್ಯಾಚ್ ಹಿಡಿಯಲು ಪ್ರಯತ್ನಿಸಿ ಕನ್ನಡಕ ಕೆಳಗೆ ಹಾಕಿತು.
ಪ್ರೇಮ ಮಂದಿರ ದಲ್ಲಿ ನರ್ತಿಸುವ ನೀರಿನಲ್ಲಿ ಸುಂದರ ಬೆಳಕಿನ ಸಂಯೋಜನೆ ಮಾಡಿದ್ದಾರೆ. ಕೊಲ್ಲಿ ದೇಶಗಳಲ್ಲಿ ನಡೆಸುವ fire works ತರಹ ಮಾಡಿದ್ದರು. ನಮ್ಮೆಲ್ಲರಿಗೂ ತುಂಬಾ ಮುದ ತರಿಸಿತು



















 

ಸುವರ್ಣ ತ್ರಿಭುಜ (Golden Triangle) ಪ್ರವಾಸದ ಕೆಲವೊಂದು ಜ್ಹಳಕುಗಳು

ಮೊದಲ ದಿನ

ನಾವು ಮುಂಜಾವಿನ  ನಾಲಕ್ಕು ಮೂವತ್ತಕ್ಕೆ ವಿಮಾನ ನಿಲ್ದಾಣದಿಂದ  ಹೊರಬಂದೆವು. ದೆಹಲಿಯಲ್ಲಿ ನಮ್ಮನ್ನು ಕರೆದುಕೊಂಡುಹೊಗಲಿಕ್ಕೆ ನಮ್ಮ ಪ್ರವಾಸದ ಸಾರಥಿ (driver ) ನಮಗಾಗಿ ತಮ್ಮ  ಬಿಳಿ ರಥದ (White Car ) ಜತೆಗೆ ಕಾದು ಕುಳಿತಿದ್ದರು. ಹೋಟೆಲ್ ನಲ್ಲಿ ನಮ್ಮ ಬ್ಯಾಗ್ ಬಿಟ್ಟು ಬೆಳಗಿನ ಚಹಕ್ಕಾಗಿ ಒಂದು ೨೪/೭ ಮಳಿಗೆ ಪ್ರವೆಶಿಸಿದೆವು. ಅಲ್ಲಿ ಕಾಫಿ ಹೀರಿ ಒಂದೆರಡು ಬಿಸ್ಕುತ್ತಿನ ಪೊಟ್ಟಣ ಖರೀದಿಸಿ ಮರಳಿ ಹೋಟೆಲ್ ಕಡೆ ಬಂದು ನಮ್ಮ ಮುಂಜಾವಿನ ದಿನಚರಿಗಳನ್ನು ಮುಗಿಸಿ ದೆಹಲಿಯ ಒಂದು ಪಕ್ಷಿನೋಟ ನಡೆಸಲು ಹೊರೆಟೆವು.

ಕೆಂಪು ಕೋಟೆಯ ಹೊರಾಂಗಣ ಮತ್ತು ಒಳಾಂಗಣ ವೀಕ್ಷಣೆಗೆ ತೆರಳಿದೆವು. ಸ್ವಾತಂತ್ರ್ಯ ದಿನದ ತಯಾರಿ ನಡೆಯುತ್ತಿದ್ದ ಕಾರಣ ಪೋಲಿಸ್ ಸೈನ್ಯ ಅಲ್ಲಿ ಪಹರೆ ನಡೆಸುತ್ತಿತ್ತು. ಕೆಂಪು ಕೋಟೆಯ ಪ್ರವೇಶಕ್ಕೆ ಎರಡು ದ್ವಾರಗಳು - ಲಾಹೋರ್ ಗೇಟ್ ಮತ್ತು ದೆಹಲಿ ಗೇಟ್ . ಒಂದು ಗೇಟ್ ಅನ್ನು ಸುರಕ್ಷಿತ ಕಾರಣಗಳಿಗಾಗಿ ಮುಚ್ಚಲಾಗಿತ್ತು.  ಹಾಗಾಗಿ ತೆರೆದಿದ್ದ ಗೇಟ್ ನಲ್ಲಿ ತುಸು ಹೆಚ್ಚಿಗೆ ಎನ್ನುವಸ್ಟು ಜನ ಜಂಗುಳಿ ಇತ್ತು.  ಪ್ರಧಾನ ಮಂತ್ರಿಗಳ ಭಾಷಣಕ್ಕಾಗಿ  ಗ್ಯಾಲರಿ ಕಟ್ಟುವ ಜನ ಸೇರಿದ್ದರು.
ಸುಮಾರು ಎರಡು ತಾಸು ಸುತ್ತಾಡಿದ ಬಳಿಕ ಹೊರಗೆ ಬಂದೆವು.

ಹೊರಕ್ಕೆ ಬಂದ ಬಳಿಕ ಅಲ್ಲಿಯೇ ಚಾಂದನಿ ಚೌಕದ ಸುತ್ತಾಟಕ್ಕೆ ಒಂದು ಸ್ಯೆಕಲ್ ರಿಕ್ಷಾ ಗೊತ್ತು ಮಾಡಿದೆವು,  ಸ್ಯೆಕಲ್ ರಿಕ್ಷಾ ಚಾಲಕ ಸಾದಾರಣ ೩೦-೩೫ ರ ತರುಣ , ಅವನು  ಪ್ಯಾಂಟ್ ಮತ್ತು ಬನಿಯನ್ ದರಿಸಿದ್ದ. ಪ್ಯಾಂಟ್ ಹರಿದಿತ್ತು, ಅವನು ಹೇಳಿದ ರೇಟ್ ಗೆ ಒಪ್ಪಿಕೊಂಡೆ ಅಂದ ಹಾಗೆ ಅವನು ಅಂತಹ ವಿಶೇಷ ಬೆಲೆ ಕೇಳಲಿಲ್ಲ. ಬಹುಶ ೧೫೦ ಅಥವಾ ೧೭೫ ಕೇಳಿರಬೇಕು.

ಅಲ್ಲಿನ ಬೆಳ್ಳಿಯ ಮತ್ತು ಬಂಗಾರದ ಸಾಮಗ್ರಿ ಮಾರುವ ಗಲ್ಲಿ, ಬಟ್ಟೆ ಅಂಗಡಿಯ ಗಲ್ಲಿ, ಪರಾಟ ಗಲ್ಲಿ ಎಲ್ಲ ಸುತ್ತಾಡಿಸಿದ, ಪರಾಟ ಗಲ್ಲಿಯಲ್ಲಿ ಅಲ್ಲಿನ ಪರಾಟ ಮತ್ತು ಲಸ್ಸಿ ಸವಿದೆವು. ನನ್ನ ಮಗನಿಗೆ ಲಸ್ಸಿಯ ರುಚಿ ನಾಲಿಗೆ ಹಿಡಿದುಕೊಂಡದ್ದು ಇಲ್ಲಿಯೆ. ಪ್ರತಿ ಸಲವು ಲಸ್ಸಿ ಬೇಕೆಂದು ವರಾತ ತೆಗೆಯಲಿಕ್ಕೆ ಹತ್ತಿದ್ದ. ಅಲ್ಲಿಯ ಜಾಮಾ ಮಸೀದಿಯ ಹೊರಾಂಗಣದ  ಒಂದೆರಡು ಛಾಯಾ ಚಿತ್ರ ತೆಗೆದು ಕೊಂಡೆವು.

ಅಂದ ಹಾಗೆ ನಾವು ಪರಾಟ ಸವಿಯುವಾಗ ನಮ್ಮ ರಿಕ್ಷಾ ಚಾಲಕ ಒಳಗೆ ಗಾಡಿ ತಂದರೆ ತಿರಿಗಿಸಲು ಸ್ವಲ್ಪ ಕಷ್ಟ ಎಂದು ಹೊರಗೆ ನಿಂತಿದ್ದ. ನಾನು ಅವನ ಫೋನ್ ಸಂಖ್ಯೆ ಕೇಳಲು ಮರೆತಿದ್ದೆ. ಪರಾಟದ ತಿಂದ ನಮಗೆ ಸ್ಯೆಕಲ್ ರಿಕ್ಷಾ ಎಲ್ಲಿ ಎಂದು ಹುಡುಕ ಬೇಕಾಯಿತು. ಅಲ್ಲಿನ ವಾಹನದ ಜಂಗುಳಿ ಎಲ್ಲಿ ಎಂದು ಹುಡುಕುವುದು? ಅಲ್ಲಿಯೇ ಹೋಗುತ್ತಿದ್ದ ಒಂದೆರಡು ಸ್ಯೆಕಲ್ ರಿಕ್ಷಾದವರು ನಮ್ಮ ಹಿಂದೆ ಬಂದು ಬಂದು ಕೇಳಲಿಕ್ಕೆ ಹತ್ತಿದ್ದರು. ಕಡಿಮೆಯಲ್ಲಿ ಕರೆದುಕೊಂಡು ಹೋಗುತ್ತೇವೆ ಹಾಗೆ ಹೀಗೆ ಎಂದು.  ಸುಮಾರು ಅರ್ದ ತಾಸು ಅಲ್ಲಿ ಇಲ್ಲಿ ಹುಡುಕಾಡಿದೆವು, ನಮಗೆ ಜೊತೆಗೆ ಸ್ವಲ್ಪ ಪಾಪ ಪ್ರಜ್ಞೆ ಕಾಡಲಿಕ್ಕೆ ಶುರು ಆಯಿತು. ಇಸ್ಟೆಲ್ಲಾ ತಿರುಗಿಸಿದ ಜನ ದುಡ್ಡು ತೆಗೆದುಕೊಳ್ಳದೆ ಹೋದನಲ್ಲ ಅಂತ. ಅಸ್ಟು ಹೊತ್ತಿಗೆ ನನ್ನ ಮಗನನ್ನು ನೋಡಿಯೋ ಅಥವಾ ನಮ್ಮನ್ನು ನೋಡಿಯೋ ಸವಾರ ಪ್ರತ್ಯಕ್ಷ ಆದ.

ನಮ್ಮನ್ನು ಪುನ ಪಾರ್ಕಿಂಗ್ ಗೆ ತಲುಪಿಸಿ ನಾನು ಕೊಟ್ಟ ಕ್ರಯವನ್ನು ಲೆಕ್ಕವೂ ಮಾಡದೇ ಕಿಸೆಗೆ ಹಾಕಿಕೊಂಡು ತನ್ನ ಮುಂದಿನ ಗ್ರಾಹಕನಿಗಾಗಿ ಹೊರಟೆ ಬಿಟ್ಟ.

ನಂತರ ನಾವು ಅಕ್ಷರ ಧಾಮ (ಸ್ವಾಮಿ ನಾರಾಯಣ) ಮಂದಿರ ದ ಕಡೆಗೆ ಹೊದೆವು. ತುಂಬಾ ಸುಂದರವಾಗಿ ಕಟ್ಟಿದ್ದಾರೆ , ಎತ್ತರವಾದ ಮಂದಿರ ಸ್ವಚವಾಗಿ ಇಟ್ಟಿದ್ದಾರೆ. ಸ್ವಾಮಿ ನಾರಾಯಣ ಎಂದರೆ ಸರಿ ಸುಮಾರು ೧೮ ನೆ ಶತಮಾನದ ಒಬ್ಬ ಯೋಗಿ (ನಮ್ಮ ನಾರಾಯಣ ಗುರು ಗಳ ಸಮಕಾಲಿನರೋ?) ಅಂತು ಜನರ ಭಕ್ತಿ ಮತ್ತು ಶ್ರದ್ದೆಗೆ ಮೆಚ್ಚ ಬೆಕು. ಅಲ್ಲಿ ಇದ್ದ ಹಾಗೆಯೇ ಸಣ್ಣದಾಗಿ ಮಳೆ ಹನಿಯಲು ತೊಡಗಿತು.
ಅಲ್ಲಿಂದ ಮುಂದೆ ನಾವು ರಾಜ್ ಘಾಟ್ ಮತ್ತು ಶಕ್ತಿ ಸ್ತಳ ದ ಕಡೆಗೆ ಸಾಗಿದೆವು. ರಾಜ್ ಘಾಟ್ (ಮಹಾತ್ಮಾ ಗಾಂಧಿಯ ಸಮಾಧಿ)
ನಲ್ಲಿ ಸಮಾದಿಯ ಹತ್ತಿರ ಬರಿಗಾಲಿನಲ್ಲಿ ಹೊಗಬೇಕು.
ಶಕ್ತಿ ಸ್ತಳ ದಲ್ಲಿ ಇಂದಿರ ಗಾಂಧಿ ಮತ್ತು ರಾಜೀವ್ ಗಾಂಧಿ ಯಾ ಸಮಾಧಿ ಇದೆ. ಶಾಂತಿವನ ದ ಪಕ್ಕದಲ್ಲಿ ಸಮಾಧಿ ಗಳನ್ನೂ ಕಟ್ಟಲಾಗಿದೆ.

ಹಾಗೆಯೆ ನಂತರ ಹುಮಾಯುನ್ ಗೋರಿ ನೋಡಲಿಕ್ಕೆ ತೆರಲಿದೆವು. (ನೋಡಲಿಕ್ಕೆ ದೇವಸ್ತಾನ ದ ಹಾಗೆ ಇದೆ.) ಈ ಮುಘಲರು ಏನು ಮಾಡಿದ್ದರು ಎಂದು ಚರಿತ್ರೆ ಸರಿಯಾಗಿ ನಮಗೆ ತಿಳಿಸುವುದಿಲ್ಲ

that is the end of our first day.

 

ಮಂಗಳವಾರ, ಸೆಪ್ಟೆಂಬರ್ 8, 2015

Sweet memories of Golden Triangle Tour 2015

As I got approval for my annual vacation which is falling by the side of Abhiman school holidays we decided to go for visit of Delhi-Agra-Jaipur famously known as Golden Triangle.

Our tour consisted of me, Smitha and Abhiman starting from 07th of August till 14th of August.

Day One - we visited
1. Red Fort
2. Chandani Chowk,
3. Swami Narayan Mandir,
4. Raj Ghat,
5. Humayun Tomb
6. Shakthi Sthal
Stay was at Carol Baug

Day Two - we travelled to Mathura - Night stay was at Brindavan

At Brindavan we visited -
1. Prem Mandir
2. Bangi Bihari Mandir
3. Hanuman Mandir
4. Govind Mandir
5. Jai Mata di Mandir (near Brindavan mod)

Day Three - (Mathura & Gokul)
  • Visited Mathura Temple
  • And Gokul Temple
  • Taj Mahal
  • Red Fort
Night stay at Agra

Day Four - Travel to Jaipur via Fatepur Sikri (Night stay at Jaipur)
  • Fatepur Sikri - Fakir Imran Chisti
  • Jaipur - Birla Mandir
  • Chowki Dani
Day Five
  • Hawa Mahal
  • City Mahal
  • Jantar Mantar
  • Amber Fort
  • Jal Mahal
Night stay at Jaipur
Day Six
  • Ajmer Darga Sharief
  • Pushkar
Night stay at Pushkar
Day Seven
  • Travel to Delhi
  • Visit to Delhi Gate
  • Parliament Buildings
  • Birla Mandir
Day Eight
  • Worls of Wonders (Water park)
  • Lotus Temple
Day Nine - early morning flight to Pune