ಐದನೆಯ ದಿನ ಬೆಳಿಗ್ಗೆ ಯಥಾ ಪ್ರಕಾರ ಬೇಗ ಎದ್ದು ಮುಂಜಾವಿನ ಕಾರ್ಯಕ್ರಮ ಮುಗಿಸಿ ನಮ್ಮ ಬಂಡಿ
ಕನ್ಯಾಕುಮಾರಿಯ ಕಡೆಗೆ ಹೊರಟಿತು. ಕನ್ಯಾಕುಮಾರಿಗೆ ಹೋಗುವ ಮುಚೆ ಮಾರ್ಗ ಮದ್ಯದಲ್ಲಿ ಎರಡು ವಿಶೇಷವದ ಸ್ತಳಗಳಿಗೆ ಬೇಟಿ ಕೊಟ್ಟೆವು.
1. ನಾಗರ ಕೊವಿಲ್
2. ಸುಚಿಂದ್ರಂ
ನಾಗರ ಕೊವಿಲ್ ಹೆಸರೇ ಸೂಚಿಸುವಂತೆ ನಾಗರಾಜನ ದೇವಸ್ತಾನ ಇರುವ ನಗರ. ನಾಗ ದೇವರ ಉದ್ಭವ ಲಿಂಗ ಇಲ್ಲಿ ಇದೆ ಇಂದು ಹೇಳುತ್ತಾರೆ. ಕೇರಳ ಮತ್ತು ತಮಿಳುನಾಡನ್ನು ಬೆಸೆಯುವ ಪ್ರದೇಶ. ಇಲ್ಲಿ ಜನರು ಮಲಯಾಳಂ ಮತ್ತು ತಮಿಳು ಎರಡನ್ನು ಮಾತನಾಡುತ್ತಾರೆ. ವಿಶೇಷ ವಾಗಿ ಇಲ್ಲಿನ ಸೇವೆ ಎಂದರೆ ನಾಗನ ಕಲ್ಲುಗಳಿಗೆ ಹಾಲನ್ನು ಎರೆಯುವುದು. ಜೊತೆಗೆ ಅರಸಿನ, ಹೂವು, ಕರ್ಪೂರ ಮತ್ತು ಗಂಧದ ಕಡ್ಡಿಗಳನ್ನು ಹೊತ್ತಿಸಿ ಇದಬಹುದು. ಅವಿಬಜಿತ ದಕ್ಷಿಣ ಕನ್ನಡದಲ್ಲಿ ನಾಗರ ಕಲ್ಲಿಗೆ ಹಾಲು ಎರೆಯುವ ಅಡಿಕಾರವನ್ನು ಬ್ರಹ್ಮನಶಾಹಿ ವ್ಯವಸ್ತೆ ಸಾಮಾನ್ಯ ಜನರಿಂದ ಕಿತ್ತುಕೊಂಡಿದ್ದಾರೆ ಇಲ್ಲಿ ಕಲ್ಲಿಗೆ ಹಾಲನ್ನು ಎರೆಯುವ ಅವಕಾಶ ಪ್ರತಿಯೊಬ್ಬರಿಗೂ ಇದೆ.
ನಮ್ಮ ಪೂರ್ಣ ಪ್ರವಾಸದಲ್ಲಿ ನೋಡಿದ ಎಲ್ಲ ದೇವಾಲಯಗಳಲ್ಲಿ ಇದು ಚಿಕ್ಕದಾದರೂ ಸಕಸ್ತು ಹೆಸರುವಾಸಿಯಾದ ದೇವಾಲಯವಾಗಿದೆ.
ಸುಚಿಂದ್ರಂ - ಗೌತಮ ಋಷಿಯಿಂದ ಶಾಪಕ್ಕೆ ಒಳಗಾದ ಇಂದ್ರನು (ಅಹಲ್ಯದೇವಿ ಯಾ ಪಾತಿವ್ರತ್ಯ ಬಂಗಕ್ಕೆ ಪ್ರಯತ್ನಿಸಿ ಶಾಪಗ್ರಸ್ತನಗುತ್ತಾನೆ)
ಇಲ್ಲಿ ಶಾಪವಿಮೋಚನೆ ಗೊಂಡ ಕಾರಣ ಈ ಊರಿಗೆ ಸುಚಿಂದ್ರಂ ಎಂದು ಹೆಸರು. ಇನ್ನೊಂದು ಕಥೆಯ ಪ್ರಕಾರ ತ್ರಿಮೂರ್ತಿಗಳನ್ನು ಅನಸುಯದೆವಿಯು ಚಿಕ್ಕ ಮಕ್ಕಳನ್ನಗಿಸಿ ತೊಟ್ಟಿಲಿನಲ್ಲಿ ತೊಗ್ಗಿಸಿಸ್ದ ಸ್ತಳವಿದು. ತುಂಬಾ ಪುರಾತನ ವ್ರಕ್ಷದ ಕಾಂಡಕ್ಕೆ ರಕ್ಷಣಾ ಕವಚವನ್ನು ಕಟ್ಟಿದ್ದಾರೆ. ನಮ್ಮ ಮಾರ್ಗದರ್ಶಕರು ಹೇಳಿದಂತೆ ಸುಮಾರು 6000 ವರ್ಷ ಹಲೆಯ ಮರ ಇದಾಗಿದೆ.
ಇಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರ ಗುಡಿ, ಹನುಮಂತನ ದೇವಸ್ತಾನ, ಶಂಖದಿಂದ ತಯಾರಿಸಿದ ನಂದಿಯ ವಿಗ್ರಹ, ಅನಸೂಯಾ ದೇವಿಯ ಗುಡಿಗಳನ್ನು ನೋಡಬಹುದಾಗಿದೆ. ಉಳಿದಂತೆ ಸಪ್ತಸ್ವರ ಗಳನ್ನೂ ಹೊರದಿಸುವ ಕಂಬಗಳು, ಬಲೆಯ ಕಿಂಕಿಣಿ ನಾದ ಹೊರಡಿಸುವ ಕಂಬಗಳನ್ನೂ ನೋಡಬಹುದಾಗಿದೆ.
ಸುಚಿಂದರಂ ನ ಹನುಮಂತನ ಹತ್ತಿರ ನಮ್ಮವರೊಬ್ಬರು ವದಮಾಲೆ ಯಾ ಪೂಜೆ ಸಲ್ಲಿಸಿದ್ದರು. ವಾದೆಮಾಲೆ ಎಂದರೆ ವದ (ಇದ್ಲಿವಡೆ) ದಿಂದ ಮಾಡಿದ ಮಾಲೆ.
ಇಲ್ಲಿಂದ ಮುಂದೆ ನಮ್ಮ ಪಯಣ ಕನ್ಯಾಕುಮಾರಿ ಯಾ ಕಡೆಗೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ