ಶುಕ್ರವಾರ, ಏಪ್ರಿಲ್ 20, 2012

ದಕ್ಷಿಣ ಭಾರತದ ಪ್ರವಾಸ - ಎರಡನೇ ದಿನ - ಪಾರ್ಟ್ 1

ಬೆಳಿಗ್ಗೆ ೪ ಘಂಟೆಗೆ ನಮ್ಮನ್ನು ಎಬ್ಬಿಸಲಾಯಿತು. ನಮ್ಮ ಬೆಡ್ ಟೀ - ಅಥವಾ ಬಸ್ ಟೀ ೫ ಘಂಟೆಗೆ ಬಸ್ ನಲ್ಲಿ ಕುಡಿದೆವು. ಬೆಳಿಗ್ಗೆಯ ಉಪಾಹಾರ ೮ ಘಂಟೆಯ ಹೊತ್ತಿಗೆ ಕೇರಳದ ಒಂದು ಹೋಟೆಲ್ ನಲ್ಲಿ. ಬಳಿಕ ನಮ್ಮ ಪಯಣ ಪಳನಿಯ ಕಡೆಗೆ.
ಪಳನಿ - ತಮಿಳುನಾಡಿನ ಒಂದು ಸುಂದರ ನಗರ. ಸಾಕಸ್ಟು ಬೆಟ್ಟ ಗುಡ್ಡ ಗಳಿಂದ ಕೂಡಿದ ಮನಮೋಹಕ ನಗರ. ಅಲ್ಲಿರುವ ಗಿರಿಗಳಲ್ಲಿ ಸುಂದರ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಅಂತ ಒಂದು ದೇವಸ್ತಾನವೇ ದಂಡಾಯುಧಪಾಣಿ ಅಥವಾ ಶುಲಾಯುಧಪಾಣಿ ದೇವರ ದೇವಸ್ತಾನ.
ನಡೆದುಕೊಂಡು ಬೆಟ್ಟ ಹತ್ತುವ ವ್ಯವಸ್ತೆ ಇದೆ. ಬಹುಶ ನಡೆದು ಹೋಗಲು ೪೫ ರಿಂದ ೬೦ ನಿಮಿಷ ಬೇಕಾಗಬಹುದು. ಅಧುನಿಕ ತಂತ್ರಜ್ಞಾನದ ಸಹಾಯದಿಂದ ಮೇಲಕ್ಕೆ ಹೋಗಲು ವಿದುತ್ಚಾಲಿತ ತೊಟ್ಟಿಲುಗಳ ವ್ಯವಸ್ತೆ ಮಾಡಿದ್ದಾರೆ. ಒಂದು ತೊಟ್ಟಿಲಿನಲ್ಲಿ ನಾಲ್ಕು ಜನ ಕುಳಿತುಕೊಳ್ಳಬಹುದು. ಒಂದು ಸಲಕ್ಕೆ ಒಟ್ಟಿಗೆ ೪ ತೊಟ್ಟಿಳುಗಳು ಮೇಲಕ್ಕೆ ಮತ್ತು ಅಸ್ಟೇ ಸಂಕ್ಯೆಯ ತೊಟ್ಟಿಲುಗಳ ಕೆಳಕ್ಕೆ ಚಲಿಸುವ ವ್ಯವಸ್ತೆ ಮಾಡಿದ್ದಾರೆ.
ನಾವು ೪ ಜನ ದೊಡ್ಡವರು ಮತ್ತು ಒಂದು ಮಗು ಇದ್ದ ಕಾರಣ ಎರಡು ಬೇರೆ ಬೇರೆ ತೊಟ್ಟಿಲಿನಲ್ಲಿ ಚಲಿಸಿದೆವು. ಸುಮಾರು ೫ ರಿಂದ ೮ ನಿಮಿಷ ತೊಟ್ಟಿಲಿನಲ್ಲಿ ಚಲಿಸಬೇಕಾಗುತ್ತದೆ. ಮೇಲಕ್ಕೆ ಹೋಗುವಾಗ ಅಲ್ಲಿ ನೀರಿನ ಸ್ಪ್ರಿಂಕ್ಲರ್ ಅನ್ನು ಚಾಲೂ ಮಾಡಿದ್ದರು. ನಾವೆಲ್ಲ ಎಲ್ಲಿ ಒದ್ದೆ ಆಗುತ್ತೆವೋ ಅನ್ನುವ ಭಯ ಸ್ವಲ್ಪ ಮನಸಲ್ಲಿ ಇತ್ತು. ಸ್ಪ್ರಿಂಕ್ಲರ್ ನ ನೀರು ನಮ್ಮ ಹತ್ತಿರ ಬರಲಿಲ್ಲ. ಒದ್ದೆಯಾಗುವ ಅವಕಾಶ ತಪ್ಪಿ ಹೋಯಿತು. ಆದರೆ ಸುತ್ತಮುತ್ತ ದ್ರಶ್ಯ ವಿಮಾನ ಉಡ್ಡಯಣದ ಹಂತದಲ್ಲಿ ಮೇಲಿನಿಂದ ನೋಡಿದಾಗ ಹೇಗೆ ಕಾಣುತ್ತದೆಯೋ ಅದೇ ರೀತಿ. ಅತ್ಯಂತ ಸುಂದರ ದ್ರಶ್ಯ. ಮತ್ತು ನಿದಾನಕ್ಕೆ ಚಲಿಸುವ ತೊಟ್ಟಿಲ. ವಾಆಅಹ್ಹ್ವ್ವ್ಹ್,, ಏನು ಧನ್ಯರೋ ನಾವು, ಅಧ್ಬುತ ದ್ರಶ್ಯ. ಅಂತು ನಿದಾನವಾಗಿ ನಮ್ಮ ತೊಟ್ಟಿಲು ಮೇಲಕ್ಕೆ ಹೋಗಿ ತಲುಪಿತು.
ಅಂದ ಹಾಗೆ ಈ ಶುಲಾಯುಧಪಣಿ ದೇವರು ಇಸ್ತು ದೂರ ಬಂದು ಇಲ್ಲಿ ಯಾಕೆ ನೆಲೆಸಿದರು ಎನ್ನುವ ಕುತೂಹಲ ನಮಗಿತ್ತು. ನಮ್ಮ ಕುತೂಹಲ ತಿಳಿದಂತೆ ನಮ್ಮ ಮಾರ್ಗದರ್ಶಕರಾದ ರಿತೇಶ್ ಪೌರಾಣಿಕ ಕತೆ ಹೇಳಲಿಕ್ಕೆ ಶುರು ಮಾಡಿದರು.
ಒಂದು ಸಲ ಕೈಲಾಸದಲ್ಲಿ ಶಿವ ಪಾರ್ವತಿಯರು ತಮ್ಮ ಮಕ್ಕಳಾದ ಗಣಪತಿ ಮತ್ತು ಸುಬ್ರಮಣ್ಯರರು ಆಟ ವಿನೋದಗಳನ್ನು ನೋಡುತ್ತಾ ಇರಬೇಕಾದರೆ ಅಲ್ಲಿಗೆ ದೇವರ್ಶಿಗಳಾದ ನಾರದ ಮಹಾಮುನಿಗಳು ಬರುತ್ತಾರೆ. ಆದರೋಪಚಾರದ ಬಳಿಕ ನಾರದ ಮುನಿಗಳು ತಮ್ಮ ಜೋಳಿಗೆಯಿಂದ ಒಂದು ಮಾವಿನ ಹಣ್ಣನ್ನು ತೆಗೆದು ಪಾರ್ವತಿ ದೇವಿಯ ಕೈಯಲ್ಲಿ ಕೊಡುತ್ತಾರೆ. ಮಕ್ಕಳಾದ ಗಣೇಶ ಮತ್ತು ಸುಬ್ರಮನ್ಯರು ಹಣ್ಣು ತನಗೆ ಬೇಕು ಅಂತ ಪಾರ್ವತಿಯ ಹತ್ತಿರ ಕೇಳುತ್ತಾರೆ. ಆಗ ಶಿವನು ಹಣ್ಣು ಒಂದೇ ಇರುವದರಿಂದ ಒಂದು ಶರತ್ತನ್ನು ಹಾಕುತ್ತಾನೆ. "ನಿಮ್ಮಿಬ್ಬರಲ್ಲಿ ಯಾರು ಇಡೀ ಪ್ರಪಂಚವನ್ನು ಸುತ್ತಿ ಮೊದಲು ಬರುತ್ತಾರೋ ಅವರಿಗೆ ಈ ಹಣ್ಣನ್ನು ಕೊಡುತ್ತೇನೆ" ಅಂತ.
ಶಿವನ ಶರತ್ತನ್ನು ಕೇಳಿದ ಸುಬ್ರಮಣ್ಯ ತನ್ನ ವಾಹನವಾದ ನವಿಲನ್ನು ಏರಿ ಆ ಕೂಡಲೇ ಕೈಲಾಸವನ್ನು ಬಿಟ್ಟು ಪ್ರಪಂಚದ ಪ್ರದಕ್ಷಿಣೆಗೆ ಹೊರಡುತ್ತಾನೆ. ಆದರೆ ಜಾಣನಾದ ಗಣಪತಿಯ ತನ್ನ ವಾಹನವಾದ ಇಲಿಯನ್ನೊಮ್ಮೆ ನೋಡುತ್ತಾನೆ ಮತ್ತು ಮಾತಪಿತರನ್ನೊಮ್ಮೆ ನೋಡುತ್ತಾನೆ. ಹಾರುತ್ತ ಹೋಗುವ ಮಯೂರವೆಲ್ಲಿ ನಿದಾನಕ್ಕೆ ಚಲಿಸುವ ತನ್ನ ವಾಹನವಾದ ಇಲಿ ಎಲ್ಲಿ ? ಆದರೆ ಪರಮ ಜ್ಞಾನಿಯಾದ ಗಣೇಶನು ತನ್ನ ವಾಹನವಾದ ಇಲಿಯನ್ನು ಏರಿ ಮಾತಪಿತರಾದ ಶಿವಪಾರ್ವತಿಯರಿಗೆ ಮೂರು ಸಲ ಪ್ರದಕ್ಷಿಣೆ ಬರುತ್ತಾನೆ. ಮತ್ತು ನನ್ನ ಬಹುಮಾನವಾದ ಹಣ್ಣನ್ನು ಕೊಡಿ ಎನ್ನುತ್ತಾನೆ. ಶಿವನು ನಸುನಗುತ್ತ ಕೇಳುತ್ತಾನೆ, "ಪ್ರಪಂಚದ ಪ್ರದಕ್ಷಿಣೆ ಮಾಡಿಲ್ಲ ನೀನು ಮಗನೆ, ನಿನಗೆ ಹಣ್ಣನ್ನು ಹೇಗೆ ಕೊಡಲಿ?" ಅದಕ್ಕೆ ಗಣೇಶನು ಹೇಳುತ್ತಾನೆ, "ದೇವರ ದೇವ ಮಹಾದೇವ ಮತ್ತು ಮಹಾದೇವಿಯರನ್ನು ಹೊರತು ಪಡಿಸಿ ಪ್ರಪಂಚ ಉಂಟೆ. ನೀವೇ ನನಗೆ ತಂದೆ ತಾಯಿ. ಮತ್ತು ತಂದೆ ತಾಯಿಗೆ ಮಿಗಿಲಾದ ಇನ್ನೊಂದು ಪ್ರಪಂಚ ಇಲ್ಲ. ಇದ್ದರೂ ಅಂತ ಪ್ರಪಂಚ ನನಗೆ ಬೇಡ. ಆ ಕಾರಣಕ್ಕಾಗಿ ನಾನು ಒಂದಲ್ಲ ಮೂರೂ ಪ್ರದಕ್ಷಿಣೆ ಮಾಡಿದ್ದೇನೆ, ಹಣ್ಣು ನನಗೆ ಕೊಡಬೇಕು" ಎಂದು ಕೇಳುತ್ತಾನೆ. ಸುಪ್ರಸನ್ನರಾದ ಶಿವ ಪಾರ್ವತಿಯರು ಹಣ್ಣನ್ನು ಗಣಪತಿಗೆ ಕೊಡುತ್ತಾರೆ.
ಅಸ್ಟು ಹೊತ್ತಿಗೆ ಪ್ರಪಂಚವನ್ನು ಸುತ್ತಿ ಸುಬ್ರಮಣ್ಯ ಕೈಲಾಸಕ್ಕೆ ಬಂದು ಮುಟ್ಟುತ್ತಾನೆ. ಆದರೆ ಹಣ್ಣು ಅಣ್ಣನಾದ ಗಣಪತಿಯ ಕೈಯಲ್ಲಿ. ಸುಬ್ರಮಣ್ಯ ಸ್ವಾಮಿಗೆ ಕೋಪ ಬರುತ್ತದೆ, ಅಲ್ಲಿಂದ ಎದ್ದು ಹೊರಟವನು ಸೀದಾ ಬಂದು ಪಳನಿಗಿರಿಯಲ್ಲಿ ನೆಲೆ ಯಾಗುತ್ತಾನೆ.
ಈ ಕಥೆ ಕೇಳಲು ನವಿರಾಗಿದೆ. ಅಲ್ಲಿನ ಪ್ರಶಾಂತ ವಾತಾವರಣ ಜತೆಗೆ ನಿರ್ಮಲವಾದ ಗಾಳಿ ಮನಸ್ಸಿಗೆ ಮುದ ನೀಡುತ್ತದೆ. ಪಳನಿಯ ಬಗೆಗಿನ ಹೆಚ್ಚಿನ ವಿವರಗಳಿಗೆ ಕೆಳಗಿನ ಕೊಂಡಿಯನ್ನು ಓದಿ - http://palani.org/
ಸುಬ್ರಮಣ್ಯ ಸ್ವಾಮಿ ಯನ್ನು ಅರ್ಮುಗನ್, ಮುರುಗನ್, ಸ್ಕಂದ,
ಶಂಮುಘ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ದಂಡಾಯುಧಪಾಣಿ ದೇವರ ಜತೆಗೆ ಗಣಪತಿ, ಶಿವ, ಪಾರ್ವತಿ, ನಂದಿ ದೇವರ ಮೂರ್ತಿಗಳನ್ನು ಕಾಣಬಹುದು.
ಪ್ರಸಾದ ರೂಪದಲ್ಲಿ ಲಡ್ಡು, ಅರವನ ಪ್ರಸಾದ, ಪಂಚಕಜ್ಜಾಯ ಸಿಗುತ್ತದೆ.
ಅಲ್ಲಿನ ಬೆಟ್ಟದಲ್ಲಿ ನಮ್ಮ ಪೂರ್ವಜರಾದ ಮಂಗಗಳು ಕಾಣಸಿಗುತ್ತವೆ.
ಪಳನಿಯಿಂದ ಮುಂದೆ ನಮ್ಮ ಪಯಣ ತಿರುಚಿಗೆ. ತಿರುಚಿಯಲ್ಲಿ ಮದ್ಯನ್ನದ ಊಟ. ಊಟ ಆದ ತರುವಾಯ ನಮ್ಮವಾಹನ ಶ್ರೀರಂಗಂ ಗೆ ತೆರಳಿತು.
ಅಂದ ಹಾಗೆ ಬೆಳಿಗ್ಗೆ ನಮ್ಮ ಪಯಣದ ಹೊತ್ತಿನಲ್ಲಿ ಬಸ್ಸಿನಲ್ಲಿ ಎಲ್ಲರ ಪರಿಚಯದ ಕಾರ್ಯಕ್ರಮವನ್ನು ನಡೆಸಲಾಯಿತು. ಪ್ರತಿಯೊಬ್ಬರೂ ತಮ್ಮ ತಮ್ಮ ಹೆಸರು, ವ್ರತ್ತಿ, ಪ್ರವ್ರತ್ತಿ,, ಹವ್ಯಾಸ ಇತ್ಯಾದಿಗಳ ಬಗ್ಗೆ ಸ್ವಲ್ಪ ಸ್ವಲ್ಪ ಹೇಳಿಕೊಂಡರು .
೨. ಶ್ರೀರಂಗಂ - ಒಂದು ದ್ವೀಪದ ಊರು. ಕಾವೇರಿ ನದಿ ಸುತ್ತುವರಿದ ಸುಂದರ ಪ್ರದೇಶ. ನಮ್ಮ ಮಾರ್ಗದರ್ಶಕರು ತಿಳಿಸಿದಂತೆ ಕಾವೇರಿ ನದಿಯ ತೀರದಲ್ಲಿ ಒಟ್ಟಿಗೆ ಮೂರು ಶ್ರೀರಂಗನಾತನ ದೇವಸ್ತಾನಗಳಿವೆ. ಕಾವೇರಿ ನದಿಯ ಆದಿ ಮಧ್ಯ ಮತ್ತು ಅಂತ್ಯ ಬಾಗದಲ್ಲಿ. ಆದಿ ಬಾಗದ ದೇವಸ್ತಾನ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಇರುವ ರಂಗನಾಥಸ್ವಾಮಿ, ಸಿವನಸಮುದ್ರದಲ್ಲಿ ಮಧ್ಯ ರಂಗಸ್ವಾಮಿ ಮತ್ತು ಶ್ರೀರಂಗಂ ನಲ್ಲಿ ಅಂತ್ಯ ರಂಗನಾಥ.
ಹಿಂದೂ ದೇವಾಲಯಗಲ ಪೈಕಿ ೨ನೆ ಅತ್ಯಂತ ಹೆಚ್ಚು ವಿಸ್ತಾರ ಇರುವ ದೇವಸ್ತಾನ ಇದಾಗಿದ್ದು. ಕಾರ್ಯ ರೂಪದಲ್ಲಿ ಇರುವ ಅತ್ಯಂತ ದೊಡ್ಡ ದೇವಾಲಯವಾಗಿದೆ. ೬೩೧,೦೦೦ ಚದರ ಅಡಿಗಳ ವಿಸ್ತೀರ್ಣ ಇರುವ ದೇವಸ್ತಾನ ಇದಾಗಿದೆ. ೨೧ ಗೋಪುರಗಳು, ಒಂದಕ್ಕಿಂತ ಒಂದು ಅದ್ಭುತ ಎನ್ನಿಸುವ ಶಿಲ್ಪಕಲೆಯನ್ನು ಒಳಗೊಂಡಿದೆ.ಕೇವಲ ಶ್ರೀರಂಗಂ ನಲ್ಲಿಯೇv ondu ವಾರ ಉಳಿದರು ನಮ್ಮ ರಿಸರ್ಚ್ ಮುಗಿಯಲಾಗದು. ಇರಲಿ ನಮ್ಮ ಅವದಿ ಕೇವಲ ಎರಡು ಘಂಟೆ. ಸಕಸ್ತು ಓಡಾಟ ಮತ್ತು ಸ್ವಲ್ಪ ತಿನುಕಾಟ.
ಪುರಾಣಗಳ ಪ್ರಕಾರ ಶ್ರೀರಾಮಚಂದ್ರ ಪೂಜಿಸಿದ ಶ್ರೀಹರಿಯಾ vigrahaವನ್ನು ತನ್ನ ಭಕ್ತನಾದ ವಿಭೀಷಣ ನಿಗೆ ಶ್ರೀರಾಮ್ ಕೊಡುತ್ತಾನೆ. ವಿಭಿಷಣ ನು ಶ್ರೀಹರಿಯ vigrahaವನ್ನು ಲಂಕೆಗೆ ತೆಗೆದುಕೊಂಡು ಹೋಗಲು ಆಕಾಶ ಮಾರ್ಗವಾಗಿ ಸಂಚರಿಸುತ್ತ ಹೋಗುತ್ತಾನೆ. ಆಗ ದೇವತೆಗಳೆಲ್ಲ ಒಟ್ಟಾಗಿ ಲಂಕೆಗೆ ದೇವರ ವಿಗ್ರಹವು ಹೋದರೆ ಭಾರತದ ಸರ್ವ ಸಂಪದವು ಅಲ್ಲಿಗೆ ಹೋಗುತ್ತದೆ ಹೀಗೆ ಆಗ ಬರದು ಎಂದು ಆಲೋಚಿಸಿ ವಿಜ್ಞ ನಿವರಕನದ ಗಣೇಶನ ಮೊರೆ ಹೋಗುತ್ತಾರೆ. ಈ ಅವಗಡ ವನ್ನು ತಪ್ಪಿಸು ಎಂದು. ಗಣಪತಿಯ ಚಿಕ್ಕ ವಟುವಿನ ರೂಪದಲ್ಲಿ ಬಂದು ಕಾವೇರಿ ತೀರದಲ್ಲಿ ನಿಲ್ಲುತ್ತಾನೆ. ಆಗ ಸಾಯಂ ಸಂಧ್ಯಾ ಕಾಲವಾಗಿರುತ್ತದೆ. vibhiಷನ ನು ಓರ್ವ ನಿಸ್ತವಂತ ಬ್ರಾಹ್ಮಣ. ಸಂಧ್ಯಾವಂದನೆ ಅತ್ಯಂತ ಅವಶ್ಯವಾದ ಕ್ರಿಯೆ. ಹಾಗಾಗಿ ಅವನು ಕಾವೇರಿ ತೀರದಲ್ಲಿ ದೇವರ ವಿಗ್ರಹ ವನ್ನು ಕೈಯಲ್ಲಿ ಹಿಡಿದು ಹೇಗೆ ಸಂದ್ಯವಂದನೆ ಮಾಡಲಿ ಎಂದು ಆಲೋಚಿಸುತ್ತ ನಿಲ್ಲುತ್ತಾನೆ. ಆಗ ಅಲ್ಲಿಯೇ ನಿಂತಿದ್ದ ಗಣಪತಿಯು ಅಯ್ಯ ನಿನ್ನ ಸಮಸ್ಯೆ ಏನು ಎಂದು ಕೇಳುತ್ತಾನೆ. ಆಗn ವಿಭಿಶೇನ್ನು ತನ್ನ ಕೈಯಲ್ಲಿ ಇದ್ದ vigraha vannu ಸ್ವಲ್ಪ ಹೊತ್ತು ಹಿಡಿದು ಕೊಂದು ನಿಲ್ಲಲು ಗಣೇಶನನ್ನು ಕೋರುತ್ತಾನೆ. ಆಯಿತು ಎಂದ ಬಾಲಕ ಗಣೇಶನು, ವಿಭಿಷಣ ನು ಪ್ರಾರ್ಥನೆಯಲ್ಲಿ ನಿರಥನದಾಗ ತನ್ನ ಕೈಯಲ್ಲಿ ಎದ್ದಂತ ವಿಗ್ರಹ ವನ್ನು ನೆಲದ ಮೇಲಿತ್ತು ಮಾಯವಾಗುತ್ತಾನೆ. ವಿಗ್ರಹವೇ ವನ್ನು ಇರಿಸಿದ ಜಾಗ ಒಂದು ಬಂಡೆಕಲ್ಲು ಇರುವ ಪ್ರದೇಶ ಆಗಿರುತ್ತದೆ. (ಅದುವೇ ಬಂಡೆಗಲ್ಲಿನ ಗಣಪತಿ ದೇವಸ್ತಾನ) ಮುಂದೆ ದೇವತೆಗಳೆಲ್ಲ ಪ್ರರ್ಥಿಸಿಸಿ ಶ್ರೀದೆವರನ್ನು ಶ್ರೀರಂಗಂ ನಲ್ಲಿ ಪ್ರತಿಸ್ತಪಿಸುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಕೊಂಡಿಯನ್ನು ಓದಿ - www.srirangam.org/
ಚೋಳ ಶೈಲಿಯ ದೇವಾಲಯ ತುಂಬಾ ಸುಂದರವಾದ ಗೋಪುರಗಳು. Since the temple is built in very vast area, it took lot of time to cover. We were taking photos of the various Gopuram and also of scriptures. It was a fun. But we missed the group. I sensed the mistake, immediately I called our co-ordinator to guide us to come back to the place of Bus. But he could not recognise the place where we were.
ನಡೆದಸ್ತು ನಮ್ಮ ಮಾರ್ಗದರ್ಶಕರಿಗೆ ದೂರವಾಣಿ ಕರೆಯನ್ನು ಮಾಡಿದೆ. ನಾನು ಹೇಳಿದ ಸ್ತಳ ಅವರಿಗೆ ತಿಳಿಯಲಿಲ್ಲ. ಅಂತು ಅಲ್ಲಿ ಸ್ವಲ್ಪ ಅವರಿವರ ಜತೆ ಕೇಳಿ ವಾಪಾಸ್ ಬಂದೆವು. ಜತೆಗೆ ಅಮ್ಮ ಎಲ್ಲಿದ್ದಾರೆ ತಿಳಿಯಲಿಲ್ಲ. ಬಂದಾಗ vaapasu bandaga ಅಮ್ಮ ಬಸ್ಸಿನಲ್ಲಿ ಇದ್ದರು.
ಅಲ್ಲಿಂದ ಮುಂದೆ ತಿರುಚಿಯ ಬಂಡೆಗಲ್ಲಿನ ಮೇಲಿರುವ ಗಣಪತಿ ದೇವಸ್ತಾನದ ಕಡೆಗೆ ನಮ್ಮ ಪಯಣ.
೩. ತಿರುಚಿಯ ಬಂಡೆಗಲ್ಲಿನ ಮೇಲಿರುವ ಗಣಪತಿ ದೇವಸ್ತಾನ-

ಕಾಮೆಂಟ್‌ಗಳಿಲ್ಲ: