ಭಾನುವಾರ, ಏಪ್ರಿಲ್ 22, 2012

ದಕ್ಷಿಣ ಭಾರತ ಪ್ರವಾಸ ಮೂರನೆಯ ದಿನ - ಪಾರ್ಟ್ 1

ಮೂರನೆಯ ದಿನ ಬೆಳಿಗ್ಗಿನ ಆಲಾರಂ ೫ ಘಂಟೆಗೆ ಕೊಡಲಾಯಿತು. ತಂಜಾವೂರಿನಲ್ಲಿಯ ಹೊಟೇಲ್ ರೂಮ್ ಚೆನ್ನಾಗಿತ್ತು.
ನಮಗೆ ರಾತ್ರಿಯ ಹೊತ್ತಿನಲ್ಲಿ ಊಟ ಸಿಕ್ಕಿರಲಿಲ್ಲ ಬದಲಾಗಿ ಉಪಹಾರದ ವ್ಯವಸ್ತೆ ಮಾಡಿದ್ದರು. ಭಾರತದಲ್ಲಿ ವಿದ್ಯುತ್ ನ ಕಣ್ಣು ಮುಚ್ಚಾಲೆ ಆಟ ಎಲ್ಲಾ ಊರಿನಲ್ಲಿಯು ಇದೆ ಎನ್ನುವುದು ನಮಗೆ ತಂಜಾವೂರಿನಲ್ಲಿ ಸರಿಯಾಗಿ ಅನುಭವಕ್ಕೆ ಬಂತು. ರಾತ್ರಿ ಉಪಹಾರಕ್ಕೆ ಕುಳಿತಾಗ ಹೊದ ವಿದ್ಯುತ್ ನಾವು ತಿಂಡಿ ಮುಗಿಸಿ ಕೈ ತೊಳೆದು ಬರುವಸ್ಟು ಹೊತ್ತು ಬಂದಿರಲಿಲ್ಲ. ಅಭಿಗೆ ಅಲ್ಲಿನ ಎಲ್ಲಾ ಮಾಣಿಗಳು ಬಹಳ ಹಿಡಿಸಿಬಿಟ್ಟಿದ್ದರು. ಅಥವ ಅವರಿಗೆ ಇವನು ಇಸ್ಟ ಆದದ್ದೊ, ಅಂತೂ ರಾತ್ರೆಯ ಉಪಹಾರ ಮಾಡಿದ
ಸ್ತಳದಲ್ಲಿಯೆ ನಮ್ಮ ಈ ದಿನದ ಬೆಳಿಗ್ಗೆಯ ನಾಸ್ಟಕ್ಕೆ ನಿಲ್ಲಿಸಿದಾಗ ನಮ್ಮ ಪುಟಾಣಿಗೆ ಬಹಳ ಕುಶಿ.

ಬೆಳಿಗ್ಗೆ ಉಪಹಾರ ಮುಗಿಸಿ ನಮ್ಮ ಪಯಣ ಬ್ರಹದೀಶ್ವರ ಆಲಯದ ಕಡೆಗೆ. ಅತ್ಯಂತ ನೀಟಾಗಿ ಇರುವ ಮತ್ತು ಶುಚಿತ್ವದ ಬಗ್ಗೆ
ಜಾಸ್ತಿ ಒತ್ತು ನೀಡಿರುವ ಮಂದಿರ ಇದಾಗಿದೆ. ಯುನೆಸ್ಕೊ ವರ್ಲ್ಡ್ ಹೆರಿಟೆಜ್ ಸಂರಕ್ಶಿತ ಮಂದಿರ ಇದಾಗಿದ್ದು, ಕಸ ಅಥವ ಇನ್ನವುದೆ ವಸ್ತುಗಳನ್ನು ಆಯಾ ಕಸದ ಡಬ್ಬಿಗಳಲ್ಲಿ ಎಸೆಯುವ ಬಗ್ಗೆ ಮಾಹಿತಿ ಜತೆಗೆ ನಿಗಾವನ್ನು ಕೊಡಲಾಗಿದೆ.

ಹೆಸರೇ ಸೂಚಿಸುವಂತೆ ಬ್ರಹದೀಶ್ವರದಲ್ಲಿನ ಎಲ್ಲಾ ವಿಗ್ರಹಗಳು ಆಕಾರದಲ್ಲಿ ತುಂಬಾ ದೊಡ್ಡದಾಗಿವೆ. ಅಲ್ಲಿನ ನಂದಿ ವಿಗ್ರಹ
ಅತ್ಯಂತ ದೊಡ್ಡದಾಗಿದ್ದು ಏಕ ಶಿಲಾವಿಗ್ರಹ.

ಪುರಾಣದ ಕತೆಗಳ ಪ್ರಕಾರ ತಂಜಾನ್ ಎನ್ನುವ ರಾಕ್ಸಸ ನೆಲೆಸಿದ್ದ ಊರು ಇದಾಗಿದ್ದು, ಆತನನ್ನು ಶ್ರೀಹರಿಯು ಸಂಹಾರ ಮಾಡಿದಾಗ
ಅವನ ಹೆಸರನ್ನು ಉಳಿಸುವಂತೆ ಕೇಳಿಕೊಳ್ಳುತ್ತಾನೆ. ಹಾಗಾಗಿ ಊರಿನ ಹೆಸರು ತಂಜಾವುರು. ಇನ್ನೊಂದು ಮೂಲದ ಪ್ರಕಾರ ಊರು ಬತ್ತದ ಗದ್ದೆಗಳಿಂದ ಸುತ್ತುವರಿದ ಕಾರಣ ತಾನ್ ಅನ್ಜ್ ಊರ್ (ಬಹುಶಃ ತಮಿಳು ಇರಬಹುದು) ಈ ಹೆಸರು ಕೊಡಲಾಗಿದೆ. ತಮಿಲು ನಾಡಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಭತ್ತ ಬೆಳೆಯುವ ಊರು ಇದಾಗಿದೆ.

ಬ್ರಹದೀಶ್ವರ ದೇವಾಲಯವನ್ನು ರಾಜರಾಜ ಚೋಳನು ಹನ್ನೊಂದನೆಯ ಶತಮಾನದ ಆದಿ ಬಾಗದಲ್ಲಿ ಕಟ್ಟಿಸಿದ್ದು ಎಂದು ಅಲ್ಲಿನ
ಗೈಡ್ ತಿಳಿಸಿದರು. ದ್ರಾವಿಡ ಶೈಲಿಯ ಶಿಲ್ಪಗಳು. ಚೋಳರ ಉಚ್ಚ್ರಾಯ ಸ್ತಿಥಿಯನ್ನು ತಿಳಿಸುವ ಸಲುವಾಗಿಯೊ ಅದ್ಬುತ ಎತ್ತರದ ಎಕ ಶಿಲ ವಿಗ್ರಹಳನ್ನು ನಿರ್ಮಿಸಿದ್ದಾರೆ. ಈಗಿನ ಕಾಲದಲ್ಲಿ ಇರುವ ಉಪಕರಣಗಳಿಲ್ಲದೆ ಆಗಿನ ಕಾಲದ ತಂತ್ರಗಾರಿಕೆಯಿಂದ ಅಸ್ಟು ಎತ್ತರದ ವಿಗ್ರಹಗಳನ್ನು ಪ್ರತಿಸ್ಟಾಪಿಸಿದ ಅಂದಿನ ಮೇಸ್ತ್ರಿ ಕಂ ಇಂಜಿನಿಯರುಗಳಿಗೆ ನನ್ನ ಮನದುಂಬಿದ ನಮಸ್ಕಾರಗಳು.

ಕನ್ನಡದಲ್ಲಿ ಬರೆಯುವ ಕಸ್ಟ ಜತೆಗೆ ಕೈಕೊಡುವ ನೆಟ್ ಕನೆಕ್ಶನ್ ನನ್ನ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದೆ. ಕ್ಷಮಿಸಿ ಹೆಚ್ಚಿನ ವಿವರಗಳಿಗೆ ಯುನೆಸ್ಕೋ ವೆಬ್ ಜಾಲ ಕ್ಕೆ ಬೇಟಿ ಕೊಡಿ. ನನಗೆ ಅದರ ಲಿಂಕ್ ಸಿಗುತ್ತಾ ಇಲ್ಲ.

ಮದ್ಯನ್ನದ ಊಟದ ಬಳಿಕ ನಮ್ಮ ಪಯಣ ರಾಮೇಶ್ವರಂ ಕಡೆಗೆ.
ಸದ್ಯಕ್ಕೆ ಶುಭರಾತ್ರಿ ನಾಳೆ ರಾಮೇಶ್ವರಂನಲ್ಲಿ ನಮ್ಮ ಯಾತ್ರೆಯ
ಬಗ್ಗೆ ಕೊರೆಯುತ್ತೇನೆ.

ಕಾಮೆಂಟ್‌ಗಳಿಲ್ಲ: