ತಂಜಾವೂರಿನಲ್ಲಿ ಮದ್ಯಾನ್ಹ ಊಟ ಮುಗಿಸಿ ನಮ್ಮ ಪ್ರಯಾಣ ರಾಮೇಶ್ವರಂ ಕಡೆಗೂ ಹೊರಟಿತು. ನಮ್ಮ ಪ್ರಯಾಣವು ಪ್ರಯಾಸ ಆಗದಂತೆ ಕೆಲವೊಂದು ವಿನೋದದ ಆಟಗಳನ್ನು ಏರ್ಪಡಿಸಿದ್ದರು. ಅಂತಹ ಒಂದು ಗೇಮ್ ಹೆಸರು ಹೇಳುವುದು, ಅಂದರೆ ಇದ್ದ ಎಲ್ಲ ಯಾತ್ರಿಗಳು, ನಿರ್ವಾಹಕ ವ್ರಂದದವರ ಹೆಸರನ್ನು ಹೇಳುವುದು. ಈ ಗೇಮ್ ನ ಮುಖಾಂತರ ಎಲ್ಲರ ಹೆಸರು ನೆನಪು ಉಳಿಯಲು ಸಹಕಾರಿ ಆಯಿತು.
ಇನ್ನೊಂದು ಆಟ ಇಡ್ಲಿ ಮತ್ತು ವಡ, ಈ ಆಟದ ನಿಯಮ ವಿಚಿತ್ರ, ಒಂದರಿಂದ ಅರವತ್ತರವರೆಗೆ ಹೇಳುವುದು, ಎರಡು ಬಂದ ಜಾಗದಲ್ಲಿ ಇಡ್ಲಿ ಮತ್ತು ಐದು ಬಂದ ಜಾಗದಲ್ಲಿ ವಡ ಎಂದು ಹೇಳುವುದು. ನನ್ನ ಶ್ರೀಮತಿ ಇಡ್ಲಿ - ವಡ ಆಟದಲ್ಲಿ ರನ್ನೆರ್ಸ್ ಅಪ್ ಆದಳು. ನಾನು ನಂಬರ್ ಪಾಸ್ಸಿಂಗ್ ಆಟ ದಲ್ಲಿ ರನ್ನೆರ್ ಅಪ್ ಆದೆ.
ಉಳಿದಂತೆ ಅಂತ್ಯಾಕ್ಷರಿ, ಜೋಕ್ಸ್ ಹೇಳುವುದು, ಹಾಡು ಹೇಳುವುದು. ಇದೆಲ್ಲ ನಡೆಸುತ್ತ ಇದ್ದರು. ನಮ್ಮ ಗುಂಪಿನ ಕಿರಿಯ ಸದಸ್ಯ ಅಭಿ ಒಂದೆರಡು ಹಾಡು ಹೇಳಿದ.
ರಾಮೇಶ್ವರಂ ಹೋಗುವ ಮಾರ್ಗ ಮದ್ಯದಲ್ಲಿ ಒಂದು ಕಡೆ ಟೀ ಬ್ರೇಕ್ ಗೆ ನಿಲ್ಲಿಸಿದರು. ಅಲ್ಲೊಂದು ಸಣ್ಣ ಕೊಳ, ಹಳ್ಳಿಯ ಪ್ರದೇಶ. ಎಲ್ಲರು ಬಾರತೀಯ ಪದ್ದತಿಯಲ್ಲಿ ನೈಸರ್ಗಿಕ ಕರೆಗೆ ಕಿವಿ ಕೊಡಲು ಹೋದರು. ನಮ್ಮಿಬ್ಬರಿಗೆ ಆ ಕೊಳಕ್ಕೆ ಕಲ್ಲು ಹೊಡೆಯುವ ಕೆಲಸ.
ಸುಂದರವಾದ ನೈದಿಲೆಗಳು, ಒಂದೆರಡು ಕೊಕ್ಕರೆಗಳು ಅಲ್ಲಿದ್ದವು. ಜತೆಗೆ ಸಾಕಷ್ಟು ನೆರಳಿತ್ತು. ತುಂಬಾನೆ ಆಹ್ಲಾದಕರವಾದ ವಾತಾವರಣ. ಸುಮಾರು ೨೦ ನಿಮಿಷ ನಮ್ಮ ವಾಹನವನ್ನು ಅಲ್ಲಿ ನಿಲ್ಲಿಸಿದ್ದರು. ಅಲ್ಲಿಂದ ನಮ್ಮ ವಾಹನ ಹೊರಟದ್ದು ನಂತರ ನಿಲ್ಲಿಸಿದ್ದು ರಾಮನಥಪುರಕ್ಕೆ ತೆರಳುವ ಮಾರ್ಗ ಮದ್ಯದ ಸೇತುವೆಯಲ್ಲಿ. (ಪಾಂಬನ್ ಸೇತುವೆ)
ಅಂದ ಹಾಗೆ ಹೇಳಲು ಮರೆತಿದ್ದೆ, ಬೆಳಿಗ್ಗೆ ನಾವು ಹೊರಡುವಾಗ ಒಂದು ಸಣ್ಣ ಬ್ಯಾಗ್ ಒಂದು ದಿವಸಕ್ಕೆ ಬೇಕಾಗುವ ಬಟ್ಟೆಗಲದ್ದು ಪ್ರತ್ಯೇಕವಾಗಿ ತೆಗೆದುಕೊಂಡು ಬರಲು ತಿಳಿಸಿದ್ದರು. ಅದೇ ರೀತಿ ಪ್ರತ್ಯೇಕ ಬ್ಯಾಗ್ ಹಿಡಿದುಕೊಂಡಿದ್ದೆವು. ರಾಮೇಶ್ವರಂ ಬಾರತದ ಮುಖ್ಯ ಭೂಪ್ರದೇಶವನ್ನು ಬಿಟ್ಟು ಪ್ರತ್ಯೇಕವಾದ ಒಂದು ದ್ವೀಪದಲ್ಲಿ ಇದೆ. ಅಲ್ಲಿಗೆ ನಾವು ಹೋದ ವಾಹನಕ್ಕೆ ತೆರಳುವ ಮಾನ್ಯತೆ ಇರಲಿಲ್ಲ. ಅಲ್ಲಿ ತಮಿಳುನಾಡು ರಾಜ್ಯ ಸಾರಿಗೆ ಸಂಸ್ತೆಯ ಬಸ್ಸಿನಲ್ಲಿ ಪ್ರಯಾಣಿಸಬೇಕು.
ರಾಮನಾಥಪುರಕ್ಕೆ ತೆರಳುವ ಮಾರ್ಗ ಮದ್ಯದ ಸೇತುವೆ (ಪಾಂಬನ್ ಸೇತುವೆ) ಯಲ್ಲಿ ನಮಗೆ ಛಾಯಾಗ್ರಹಣಕ್ಕಾಗಿ ಒಂದು ಹದಿನೈದು ನಿಮಿಷ ಬಸ್ಸನ್ನು ನಿಲ್ಲಿಸಿದ್ದರು. ಒಂದೆರಡು ಛಾಯಾಚಿತ್ರಗಳನ್ನು ನನ್ನ ಮುಖಹೊತ್ತಿಗೆ (FACEBOOK )ನಲ್ಲಿ ಹಾಕಿದ್ದೇನೆ. ಅಲ್ಲಿಂದ ಶ್ರೀಲಂಕೆಗೆ ಕೇವಲ ೫೫ ಕಿಲೋಮೀಟರು ಗಳ ದೂರ. ಧನುಷ್ಕೋಡಿ ಯಿಂದ ಶ್ರೀಲಂಕೆ ಆರಂಬ. ಆದರೆ ನಾವು ಹೋದ ಸಂದರ್ಭದಲ್ಲಿ ಧನುಶ್ಕೊದಿಗೆ ಪ್ರಯಾಣದ ನಿರ್ಬಂದ ಇತ್ತು. ಸೇತುವೆಯಲ್ಲಿ ಜೋರಾದ ಗಾಳಿ ಬೀಸುತಿತ್ತು. ಮೇಲಿನಿಂದ ಕೆಳಕ್ಕೆ ನೋಡುವಾಗ ನಾವು ನೂರಾರು ಮೀನುಗಾರಿಕಾ ದೋಣಿಗಳನ್ನು ಕಾಣಬಹುದು.
ರಾಮನಾಥಪುರದ ಬಸ್ಸು ನಿಲ್ಲುದಾನ ದಿಂದ ನಮ್ಮ ಪ್ರಯಾಣ ತಮಿಳುನಾಡು ಸರಕಾರಿ ಬಸ್ಸಿನಲ್ಲಿ ರಾಮೇಶ್ವರಂ ದೇವಾಲಯದ ಕಡೆಗೆ.
ಸುಮಾರು ಐದು ಕಿಲೋಮೀಟರ್ ಗಳಷ್ಟು ದೂರ ಇರಬಹುದು (ರಾಮನಾಥಪುರದಿಂದ ರಾಮೇಶ್ವರಂ ದೇವಸ್ತಾನ ಇರುವ ಸ್ತಳ). ನಮ್ಮ ವಾಸ್ತವ್ಯದ ಹೋಟೆಲ್ ದೇವಸ್ತನದಿಂದ ಕೇವಲ ಐವತ್ತು ಅಡಿಗಳಸ್ತು ದೂರದಲ್ಲಿ ಇತ್ತು.
ರಾಮೇಶ್ವರದ ಸ್ಥಳ ಪುರಾಣದ ಪ್ರಕಾರ - ರಾವಣ ವಧೆಯ ನಂತರ ಸೀತ ಸಮೇತನಾಗಿ ಶ್ರೀರಾಮ, ಲಕ್ಷ್ಮಣ, ಅಂಜನೇಯ ಎಲ್ಲರೂ ಬರುತ್ತಿರಬೇಕಾದರೆ, ರಾಮೇಶ್ವರಂ ದಲ್ಲಿ ಶ್ರೀರಾಮನಿಗೆ ಬ್ರಹ್ಮ ಹತ್ಯ ದೋಷ ಪರಿಹಾರಕ್ಕಾಗಿ ಮಹಾದೇವನ ಪೂಜೆ ಮಾಡಬೇಕು ಎಂದು ತಿಳಿಯುತ್ತದೆ. ಅದಕ್ಕಾಗಿ ಶ್ರೀರಾಮನು ಹನುಮಂತನಿಗೆ ಕಾಶಿಯಿಂದ ಜ್ಯೋತಿರ್ಲಿನ್ಗವನ್ನು ತರುವ ಕೆಲಸ ಕೊಡುತ್ತಾನೆ.
ಹನುಮಂತನು ಒಂದು ಜ್ಯೋತಿರ್ಲಿನ್ಗವನ್ನು ಕೈಯಲ್ಲಿ ಹಿಡಿದುಕೊಂಡು ಆಕಾಶ ಮಾರ್ಗದಲ್ಲಿ ಬರುತ್ತಿರಬೇಕಾದರೆ ನಾರದ ಮಹಾಮುನಿಗಳು ಇದಿರು ಸಿಗುತ್ತಾರೆ. ಅವರು ಹನುಮಂತನಿಗೂ ಬ್ರಹ್ಮಹತ್ಯ ದೋಷ ಇರುವ ಕಾರಣ ಒಂದು ಜ್ಯೋತಿರ್ಲಿಂಗ ಸಾಕಾಗುವುದಿಲ್ಲ ಇನ್ನೊಂದು ಲಿಂಗವನ್ನು ತಂದು ಸಮುದ್ರ ತೀರದಲ್ಲಿ ಪ್ರತಿಸ್ತೆ ಮಾಡಲು ತಿಳಿಸುತ್ತಾರೆ. ಹಾಗೆ ಮಾರ್ಗ ಮಧ್ಯದಿಂದ ವಾಪಸು ಕಾಶಿಗೆ ತೆರಳಿ ಆಂಜನೇಯನು ಎರಡು ಜ್ಯೋತಿರ್ಲಿಂಗಗಳನ್ನು ಹಿಡಿದುಕೊಂಡು ಬರುತ್ತಾನೆ.
ಇಲ್ಲಿ ತುಂಬಾ ಹೊತ್ತು ಕಾದು ಸೀತದೇವಿಯು ಮರಳಿನಿಂದ ಶಿವನ ಲಿಂಗವನ್ನು ಮಾಡುತ್ತಾಳೆ. ಶ್ರೀರಾಮನು ಸಪತ್ನಿಕನಾಗಿ ಸೀತಾದೆವಿಯಿಂದ ನಿರ್ಮಿಸಲ್ಪಟ್ಟ ಶಿವಲಿಂಗಕ್ಕೆ ಪೂಜೆ ಮತ್ತು ಅರ್ಚನೆ ಮಾಡಿ ಮುಗಿಸುತ್ತಾನೆ. ಪೂಜೆ ಮುಗಿದ ಹೊತ್ತಿಗೆ ಹನುಮಂತನು ಎರಡು ಲಿಂಗಗಳನ್ನು ಹಿಡಿದುಕೊಂಡು ಅಲ್ಲಿ ಬಂದು ಮುಟ್ಟುತ್ತಾನೆ.
ಶ್ರೀರಾಮನು ಪೂಜೆ ಮುಗಿಸಿದ್ದೇನೆ ಎಂದು ಹೇಳಿದಾಗ ಹನುಮಂತ ಹೇಳುತ್ತಾನೆ. ದೇವ ನೀನು ಪೂಜೆ ಮಾಡಿದ್ದೂ ಮರಳಿನ ಲಿಂಗಕ್ಕೆ, ನಾನು ಕಾಶಿಯಿಂದ ಜ್ಯೋತಿರ್ಲಿನ್ಗವನ್ನು ತಂದಿದ್ದೇನೆ ಅದಕ್ಕೆ ಪೂಜೆ ಮಾಡು ಎನ್ನುತ್ತಾನೆ ಮತ್ತು ಮರಳಿನ ಲಿಂಗವನ್ನು ಸಮುದ್ರಕ್ಕೆ ಎಸೆಯಲು ಹೇಳುತ್ತಾನೆ. ಅದಕ್ಕೆ ಶ್ರೀರಾಮ ಹೇಳುತ್ತಾನೆ ತಾನು ಪೂಜೆ ಮಡಿದ ಲಿಂಗವನ್ನು ಸಮುದ್ರಕ್ಕೆ ಎಸೆಯುವುದಿಕ್ಕೆ ಆಗುವುದಿಲ್ಲ ಆದರೆ ನೀನು ತಂದ ಲಿಂಗವನ್ನು ಅದರ ಜತೆಗೆ ಪ್ರತಿಸ್ತೆ ಮಾಡುವ ಎಂದು ಹೇಳುತ್ತಾನೆ. ಇದರಿಂದ ಸಿಟ್ಟುಗೊಂಡ ಹನುಮಂತನು ಶ್ರೀರಾಮ ಪೂಜಿಸಿದ ಮರಳಿನ ಲಿಂಗವನ್ನು ಭೂಮಿಯಿಂದ ತೆಗೆದು ಸಾಗರಕ್ಕೆ ಎಸೆಯಲು ತನ್ನ ಎಡ ಕೈಯಿಂದ ಪ್ರಯತ್ನಿಸುತ್ತಾನೆ, ಆಗುವುದಿಲ್ಲ, ಬಲಗೈಯಿಂದ ಪ್ರಯತ್ನಿಸುತ್ತಾನೆ, ಆಗುವುದಿಲ್ಲ, ಎರಡೂ ಕೈಗಳಿಂದ ಪ್ರಯತ್ನಿಸುತ್ತಾನೆ, ಆಗುವುದಿಲ್ಲ. ತುಂಬಾ ಕೋಪದಿಂದ ತನ್ನೆಲ್ಲ ಬಲವನ್ನು ಹಾಕಿ ಮರಳಿನ ಲಿಂಗವನ್ನು ಭೂಮಿಯಿಂದ ಬೇರ್ಪಡಿಸಲು ಪ್ರಯತ್ನಿಸುತ್ತಾನೆ, ಆದರೆ ಏನು ಮಾಡಿದರು ಲಿಂಗ ಸ್ವಲ್ಪವು ಅಲುಗುವುದಿಲ್ಲ. ಬದಲಾಗಿ ಹನುಮಂತನು ಎಷ್ಟು ಎಳೆಯುತ್ತಾನೆ ಅಸ್ತು ಆಳಕ್ಕೆ ಲಿಂಗದ ಬೇರು ಹೋಗುತ್ತದೆ.
ಇದರಿಂದ ಮುಖಬಂಗಗೊಂಡ ಹನುಮಂತ ತನ್ನೆಲ್ಲ ದೇಹದ ಬಲವನ್ನು ಹಾಕಿ ಲಿಂಗವನ್ನು ಭೂಮಿಯಿಂದ ಕಿತ್ತುಕೊಳ್ಳಲು ಪ್ರಯತ್ನಿಸುತ್ತಾನೆ, ಹನುಮಂತನು ಎಳೆದ ರಭಸಕ್ಕೆ ಕೈಜಾರಿ ಸ್ವಲ್ಪ ದೂರಕ್ಕೆ ಹೋಗಿ ಬೀಳುತ್ತಾನೆ. ಹನುಮಂತನ ಎದೆಯಿಂದ ಮೇಲ್ಬಾಗ ಮಾತ್ರ ಭೂಮಿಯ ಮೇಲಕ್ಕೂ ಉಳಿದ ಎಲ್ಲ ಬಾಗ ಮರಳಿನ ಒಳಗೆ ಹೂತು ಹೋಗುತ್ತದೆ.
ಇದನ್ನು ನೋಡಿದ ಶ್ರೀರಾಮನು ಹೇಳುತ್ತಾನೆ, ಇನ್ನು ಮುಂದೆ ಇಲ್ಲಿನ ಪ್ರಥಮ ಪೂಜೆ ಹನುಮಂತ ತಂದ ಶಿವಲಿಂಗಕ್ಕೆ ಮತ್ತು ನಂತರದ ಪೂಜೆ ಪ್ರಾಣ ಲಿಂಗಕ್ಕೆ.
ಒಟ್ಟಾಗಿ ೫ ಲಿಂಗಗಳನ್ನು ಕಾಣಬಹುದಾಗಿದೆ.
೧. ಸೀತಾದೇವಿ ನಿರ್ಮಿಸಿದ ಮುಕ್ಯ ಲಿಂಗ.
೨. ಹನುಮಂತ ತಂದ ೨ ಜ್ಯೋತಿರ್ಲಿಂಗಗಳು.
೩. ಶಂಕರಾಚಾರ್ಯರು ತಂದ ಸ್ಪಟಿಕ ಲಿಂಗ
೪. ಚೋಳ ರಾಜನಿಗೆ ಸಿಕ್ಕಿದ ಉಪ್ಪಿನ ಲಿಂಗ.
ಮೊದಲ ಮೂರು ಲಿಂಗಗಳನ್ನು ದಿನದ ಯಾವುದೇ ಹೊತ್ತಿನಲ್ಲಿಯೂ ದರ್ಶಿಸಬಹುದಗಿದೆ. ನಾವು ಹೋದ ಮೊದಲನೇ ದಿನ ನಮಗೆ ಈ ಮೂರು ಲಿಂಗಗಳ ದರ್ಶನವಾಯಿತು. ಸ್ಪತಿಕಲಿಂಗದ ದರ್ಶನ ಬೆಳಿಗ್ಗೆ ೫ ರಿಂದ ೬.೦೦ ಘಂಟೆಯವರೆಗೆ ಮಾತ್ರ. ಮತ್ತು ದರ್ಶನಕ್ಕೆ ವಿಶೇಷವಾದ ಸಾರಥಿ ಸಾಲಿನ ಟಿಕೇಟು ಪಡೆದುಕೊಳ್ಳಬೇಕು.
ನಾವು ೫.೩೦ರ ಹೊತ್ತಿಗೆ ಮೂರು ಲಿಂಗಗಳ ದರ್ಶನ ನಡೆಸಿ, ಸೀತಾದೇವಿ, ಪಾರ್ವತಿದೇವಿ, ಹನುಮಂತ ದೇವರ ದರ್ಶನ ಮಾಡಿ ಹೊರಗೆ ಬಂದು ಸ್ವಲ್ಪ ಸೈಟ್ ಸೇಯಿಂಗ್ ಗೆ ಹೋದೆವು.
ಅಲ್ಲಿನ ಕೆಲವು ಆಟೋಗಳಲ್ಲಿ ಸೈಟ್ ಸೀಯಿಂಗ್ನ ವ್ಯವಸ್ತೆ ಇದೆ. ಒಬ್ಬರಿಗೆ ಐವತ್ತು ರೂಪಾಯಿಗಳ ಟಿಕೇಟು.
೧. ರಾಮನ ಪಾದದ ಚಿನ್ಹೆ ಇರುವ ಸ್ತಳ
೨. ಸೀತಾ ಕೊಳ
೩. ಲಕ್ಷ್ಮಣ ಕುಂದ
೪. ಸೇತುಸಮುದ್ರಕ್ಕೆ ಬಳಸಿದ ಕಲ್ಲುಗಳ ಪ್ರಾತ್ಯಕ್ಷಿಕೆ
೫. ರಾಮಕುಂದ
೬. ಅಬ್ದುಲ್ ಕಲಾಂ (ಮಾಜಿ ರಾಷ್ಟ್ರಪತಿ) ಯವರ ಮನೆ
ಇವುಗಳ ದರ್ಶನ ಮಾಡಿದೆವು. ಸ್ವಲ್ಪ ಸಮುದ್ರ ತೀರಕ್ಕೆ ಅಂತ ಹೋಗುವಾಗ ತುಂಬಾ ರಾತ್ರಿಯಾಗಿತ್ತು. ಏನು ಕಾಣುತ್ತ ಇರಲಿಲ್ಲ. ಹಾಗಾಗಿ ಅಲ್ಲಿಂದ ವಾಪಸು ಬಂದೆವು. ನಂತರದ ದಿನ ಬೆಳಿಗ್ಗೆ ಬೇಗನೆ ೪.೩೦ಕ್ಕೆ ಎದ್ದು ಸ್ಪತಿಕಲಿಂಗದ ದರ್ಶನಕ್ಕೆ ಬರಬೇಕಾಗಿತ್ತು. ಹಾಗಾಗಿ ಊಟ ಮಾಡಿ ಬಹುಶ ೧೦ರ ಹೊತ್ತಿಗೆ ಮಲಗಿದೆವು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ