ನಮ್ಮ ಪ್ರವಾಸದ ಕೊನೆಯ ದಿವಸ - ಯಾವುದೇ ಸ್ತಳದ ಸಂದರ್ಶನ ಮೊದಲ ಸೂಚಿಯಲ್ಲಿ ಇರಲಿಲ್ಲ. ಆದರೆ ಮೊದಲನೇ ದಿವಸದ ಸೂಚಿಯಲ್ಲಿ ಇದ್ದ ಬೇಕಲ್ ಕೋಟೆಯನ್ನುನಾವು ಮೊದಲ ದಿನ ನೋಡದೆ ಕಾರಣ ತಿರುಗಿ ಬರುವಾಗ ನೋಡಿಕೊಂಡು ಮಂಗಳೂರಿಗೆ ತಲುಪುವುದು ಎಂದು ನಮ್ಮ ಪ್ರವಾಸದ ನಿರ್ವಾಹಕರು ತಿಳಿಸಿದರು.
ಹೆಚ್ಚಾದ ಪ್ರಯಾಣ ಮತ್ತು ನಿದ್ರಹಿನತೆಯ ಕಾರಣ ಅಭಿಮಾನ್ ನಿಗೆ ಆರೋಗ್ಯದಲ್ಲಿ ತುಸು ಏರುಪಾರಗಿತ್ತು. ಮದ್ಯಾನ ಊಟದ ತನಕ ಬರಿ ಪ್ರಯಾಣ ಮತ್ತು ತೂಕಡಿಕೆ. ಊಟ ಆದ ಮೇಲೆ ಬೇಕಲ್ ಕೋಟೆಯ ಹತ್ತಿರ ನಮ್ಮ ಬಸ್ಸು ಸ್ವಲ್ಪ ಕಾಲ ನಿಲ್ಲಿಸಿದರು ನಮಗೆ ಕೋಟೆಯ ವೀಕ್ಷಣೆಗೆ ಸಮಯ ಸಿಕ್ಕಿತು.
ಮಗನಿಗೆ ಅರೋಗ್ಯ ಸರಿ ಇರದ ಕಾರಣ ನಾವು ಹೆಚ್ಚಿನ ಅವಕಾಶ ತೆಗೆದುಕೊಳ್ಳುವಂತಿರಲಿಲ್ಲ. ಆದರೂ ಎಲ್ಲ ದಿವಸ ಇಲ್ಲಿಗೆ ಬರಲಾಗುತ್ತದೆಯೇ , ಎಂದು ಕೋಟೆಯ ಒಳಗಡೆ ಹೋದೆವು. ಸ್ವಲ್ಪ ಹೊತ್ತು ನಡೆದು ತಿರುಗಿ ಬರುವಾಗ ಸುಮಾರು 2 ಗಂಟೆ ಯಷ್ಟು ಅವದಿ ತಗುಲಿತ್ತು. ಕೋಟೆಯಿಂದ ಸಮುದ್ರ ವನ್ನು ಗಮನವಿಟ್ಟು ನೋಡಬಹುದು. ಬೇಹುಗಾರಿಕೆ ಮತ್ತು ಪ್ರತಿ ತಂತ್ರಕ್ಕೆ ಸಾಕಷ್ಟು ಸಮಯವನ್ನು ತೆಗೆದುಕೊಳ್ಳಲು ತುಂಬಾ ಒಳ್ಳೆಯದಾದ ವ್ಯವಸ್ತೆಯನ್ನು ಇಲ್ಲಿ ಮಾಡಿದ್ದಾರೆ. ಅಂದಿನ ಪಾಳೆಯಗಾರರ ಬುದ್ದಿಮತ್ತೆ ಮತ್ತು ದೂರದರ್ಶಿತ್ವಕ್ಕೆ ನನ್ನ ಪ್ರಣಾಮಗಳು.
ಮರಳಿ ಮಂಗಳೂರಿಗೆ ಬಂದು ತಲುಪುವಾಗ ಸಂಜೆ 7 ಗಂಟೆಯಾಗಿತ್ತು.
ಮನದ ತುಂಬಾ ಕನ್ಯಾಕುಮಾರಿಯ ಸಾಗರ, ತಂಜಾವೂರಿನ ಪ್ರಶಾಂತತೆ, ರಾಮೇಶ್ವರಂ ನ ಗಜಿಬಿಜಿ, ಪಳನಿಯ ವಿಹಂಗಮ ದ್ರಷ್ಯಗಳು ಎಲ್ಲವು ತೇಲಿ ಬರುತ್ತಾ ಇತ್ತು. ಜೊತೆಗೆ ದೇಹದ ದಣಿವು ಮನದಲ್ಲಿನ ಇನ್ನೂ ನೋಡಬೇಕೆನ್ನುವ ಹಸಿವಿಗೆ ಕಡಿವಾಣ ಹಾಕಿತ್ತು.
ಧನ್ಯವಾದಗಳು "ನಿರ್ಮಲ ಟ್ರಾವೆಲ್ಸ್".

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ