ಆಗ್ರಾ ದಿಂದ ಮುಂಜಾನೆ ಉಪಹಾರ ಸೇವಿಸಿ ನಮ್ಮ ಪಯಣ ಫ಼ತೆಫ಼ುರ್ ಸಿಕ್ರೀ ಯಾ ಕಡೆಗೆ. ಸುಮಾರು ೩೦ ನಿಮಿಷದ ಪ್ರಯಾಣದ ನಂತರ ಅಕ್ಬರನ ಕನಸಿನ ನಗರಕ್ಕೆ ಬೇಟಿ ನೀಡಿದೆವು.
೧. ಬುಲಂದ್ ದರ್ವಾಜಾ
೨. ಜಾಮಾ ಮಸೀದಿ
೩. ಸಲಿಂ ಚಿಸ್ತಿ ಸಮಾದಿ
೪. ದಿವಾನ್ ಎ ಆಮ್ ಮತ್ತು ದಿವಾನ್ ಎ ಖಾಸ್ (ಎರಡು ದರಬಾರ್ ಹಾಲ್ ಗಳು)
೫. ಪಂಚ ಮಹಲ್
೬. ಬೀರಬಲ್ಲನ ಮಹಲ್
ಇದಲ್ಲದೆ ರಾಣಿಯರ ಮಹಲ್ - ಇಲ್ಲಿನ ಕಟ್ಟಡಗಳನ್ನು ರಜಪೂತ ಶ್ಯಲಿಯಲ್ಲಿ ಕಟ್ಟಲಾಗಿದೆ.
ಸಲಿಂ ಚಿಸ್ತಿ ಸಮಾದಿಗೆ ಪಾದರಕ್ಷೆಯ ಜತೆಗೆ ಪ್ರವೇಶ ನಿಷೇದಿಸಲಾಗಿದೆ. ಹೂವು ಚಾದರ್ ಹಾಕಿದರೆ ನಮ್ಮ ಮನಸ್ಸಿನ ಅಭಿಲಾಷೆ ಈಡೇರುತ್ತದೆ ಎಂದು ಅಲ್ಲಿನ ಜನ ಕರೆಯುತ್ತಿದ್ದರು.
ಹೂ ಮತ್ತು ಚಾದರ್ ಮಾರುವವರು - ಖುದಾ ನಿಗೆ ನಿಮ್ಮ ಬಕುತಿಯನ್ನು ನಿವೇದಿಸಲು ಹೂವು ಚಾದರ್ ಹಾಕಲೇ ಬೇಕು.
ಬರೇ ಸುತ್ತು ಬಂದರೆ ಏನೂ ಪ್ರಯೋಜನ ಇಲ್ಲ ಎಂದು ನಮ್ಮನ್ನು ಮನೋ ವ್ಯಥೆಗೆ ದೂಡುವ ಪ್ರಯತ್ನ ಮಾಡುತ್ತಿದ್ದರು ನಮ್ಮ ನಿರ್ದರ ಕೇವಲ ವೀಕ್ಷಣೆ ಮಾತ್ರ ಆಗಿದ್ದ ಕಾರಣ ನಾವು ಅವರ ಮಾತಿಗೆ ಮರುಳಾಗಲಿಲ್ಲ.
ದೇವರ ಪೂಜೆ ಅಥವಾ ಸೇವೆ ನಮ್ಮ ಸ್ವಂತ ಅಂತರಾತ್ಮದಿಂದ ಬರಬೇಕು ಇನ್ನೊಬ್ಬರ ದೌರ್ಬಲ್ಯವನ್ನು ಉಪಯೋಗಿಸಿ ಮಾಡಿಸಿದರೆ ಏನು ಪ್ರಯೋಜನ?

ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಸ್ಪಷ್ಟವಾಗಿ ಹೇಳಿದ್ದಾನೆ -
ಅಶ್ರದ್ಧಯಾ ಹುತಂ ದತ್ತಂ ತಪಸ್ತಪ್ತಂ ಕೃತಂ ಚ ಯತ್
ಅಸದಿತ್ಯುಚ್ಯತೇ ಪಾರ್ಥ ನಚ ತತ್ ಪ್ರೇತ್ಯ ನೋ ಇಹ
ಅರ್ಜುನ, ದೇವರಲ್ಲಿ, ದೇವರ ವಾಕ್ಯಗಳಾದ ವೇದಗಳಲ್ಲಿ, ಋಷಿಮುನಿಗಳ ಆದೇಶಗಳಲ್ಲಿ ಶ್ರದ್ಧೆಯಿಲ್ಲದೇ ಮಾಡಿದ ಹೋಮ, ಕೊಟ್ಟ ದಾನ, ಆಚರಿಸಿದ ತಪಸ್ಸು, ಮಾಡುವ ಯಾವದೇ ಕರ್ಮ ಸತ್ಕರ್ಮ ಎಂದು ಕರೆಸಿಕೊಳ್ಳುವದಿಲ್ಲ. ಬದಲಾಗಿ, ಅಸತ್ ಇತ್ಯುಚ್ಯತೇ, ಅಸತ್ಕರ್ಮ ಎಂದು ಕರೆಸಿಕೊಳ್ಳುತ್ತದೆ. ಆದರಿಂದ ಈ ಲೋಕದಲ್ಲಿಯೂ ಸತ್ಫಲ ಉಂಟಾಗುವುದಿಲ್ಲ. ಆ ಲೋಕದಲ್ಲಿಯೂ ಸತ್ಫಲ ಉಂಟಾಗುವದಿಲ್ಲ. ಕೇವಲ ದುಷ್ಫಲವೇ.
ಅಲ್ಲಿಂದ ಹೊರಟವರು ಜೈಪುರಕ್ಕೆ ಹೋಗುವ ದಾರಿಯಲ್ಲಿ ಒಂದು ಸುಂದರವಾದ ಕೋಟೆಯಂತಹ ಹೋಟೆಲಿನಲ್ಲಿ ಮದ್ಯಾನದ ಭೋಜನ ವನ್ನು ಸವಿದು ಜೈಪುರ್ ತಲುಪಬೇಕಾದರೆ ಸುಮಾರು ೩.೩೦ ಗಂಟೆಯಾಗಿತ್ತು.
ಜೈಪುರ್ ದಲ್ಲಿ ಮೊದಲಿಗೆ ಬಿರ್ಲಾ ಮಂದಿರಕ್ಕೆ ಬೇಟಿ ನೀಡಿದೆವು. ಅಮ್ರತಶಿಲೆ ಯಲ್ಲಿ ನಿರ್ಮಿಸಿದ ಸುಂದರವಾದ ಮಂದಿರ. ಫೋಟೋ ಸೆಶನ್ ಎಲ್ಲ ಮುಗಿಸಿ ನಮ್ಮ ನಿಗದಿ ಪಡಿಸಿದ ಹೋಟೆಲಗೆ ತೆರಳಿ ಸ್ವಲ್ಪ ವಿಶ್ರಾಂತಿ ಪಡೆದು ನಂತರ ರಾತ್ರಿಯ ಊಟಕ್ಕೆ ಅಲ್ಲಿಯೇ ಚೌಕಿ ದಾನಿ ಎಂಬ ಹೋಟೆಲ್/ವಿಶ್ರಂತಿಧಾಮಕ್ಕೆ ತೆರಲಿದೆವು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ