ಬುಧವಾರ, ಸೆಪ್ಟೆಂಬರ್ 9, 2015

ಬ್ರಂದಾವನ ಮತ್ತು ಮಥುರ ಕೃಷ್ಣ ನ ದರುಶನಕ್ಕೆ

ಬೆಳಿಗ್ಗೆ ಎದ್ದವರೇ ನಮ್ಮ ಗಾಡಿ ಮುಂದಿನ ತಾಣದ ಕಡೆಗೆ ಹೊರಟಿತು. ಅಂದ ಹಾಗೆ ದೆಹಲಿಯನ್ನು ಬಿಟ್ಟು ಹರ್ಯಾಣ ಮಾರ್ಗವಾಗಿ ಉತ್ತರ ಪ್ರದೇಶಕ್ಕೆ ನಾವು ಸಾಗಿದೆವು.  ಉತ್ತರ ಪ್ರದೇಶ ದಲ್ಲಿ ಪ್ರವಾಸಿ ವಾಹನ ದವರು ಪ್ರತಿ ದಿನಕ್ಕೆ ರಾಜ್ಯದ ವಾಹನ ತೆರಿಗೆ ಕಟ್ಟಬೇಕು.

ನಮ್ಮ ಚಾಲಕ ಉತ್ತರ ಪ್ರದೇಶ ಪ್ರವೇಶಿಸುವ ಸಂದರ್ಭದಲ್ಲಿ ಅಲ್ಲಿನ ವಾಹನ ತೆರಿಗೆಗಾಗಿ ಒಂದು ಕಡೆ ಸ್ವಲ್ಪ ಹೊತ್ತು ವಾಹನ ನಿಲುಗಡೆ ಮಾಡಿದ. ದಾರಿಯುದ್ದಕ್ಕೂ ಅಲ್ಲಲ್ಲಿ ಜನರು ಸಣ್ಣ ಸಣ್ಣ ಗುಂಪುಗಳಲ್ಲಿ ಗಂಗಾ ತೀರ್ಥವನ್ನು ಸುಂದರವಾಗಿ ಅಲಂಕೃತ ಕಮಾನಿನ ತರಹದ ದಂಡುನಲ್ಲಿ  ಹಿಡಿದುಕೊಂಡು ಸಾಗುತಿದ್ದರು.  ಮೊದಲು ನಾನು ನಮ್ಮ ಊರಿನಲ್ಲಿ ಬಂಜಾರ (ಹಕ್ಕಿ ಪಿಕ್ಕಿಗಳವರು) ಜನಗಳು ಈ ತರಹದ ಒಂದು ವೇಷಭೂಷಣ ಹಾಕಿಕೊಂಡು ಹೊಗುವುದನ್ನು ನೋಡಿದ್ದೆ. ಹಾಗಾಗಿ ನಮ್ಮ ಮಾರ್ಗದರ್ಶಕ (ಕಾಂತಪ್ರಸಾದ) ರಲ್ಲಿ ಏನೆಂದು ವಿಚಾರಿಸಿದಾಗ ಅವರು ಗಂಗೆಯಾ ಮಹತ್ವ ಮತ್ತು ಜನರ ನಂಬಿಕೆಯ ಬಗ್ಗೆ ತಿಳಿಸಿದರು. ಆಗ ಸ್ಮಿತಾ ಮೆಲ್ಲಗೆ "ನನಗೆ ಇದು ಮೊದಲೇ ಗೊತ್ತಿತ್ತು" ಎಂದಳು. ಅವಳು ಈ ಮೊದಲು ತನ್ನ ಹೆತ್ತವರ ಜತೆಗೆ ದೆಹಲಿ ದರ್ಶನಕ್ಕೆ ಬಂದಿದ್ದಳಂತೆ.

ಬ್ರಂದಾವನಕ್ಕೆ ತಿರುಗುವ ಮಾರ್ಗದಲ್ಲಿ ಒಂದು ಎತ್ತರವಾದ ದೇವಿಯ ಮಂದಿರವನ್ನು ನಿರ್ಮಾಣ ಮಾಡಿದ್ದಾರೆ. ವೈಷ್ಣೋ ದೇವಿ ಯಾ ದೇವಾಲಯ. ದೇವರ ದರುಶನ ಮಾಡಿದೆವು. ಅಲ್ಲಿನ ವಿಶೇಷ ಎಂದರೆ ಗುಹೆಯ ಮೂಲಕ ಮಹಾದೇವಿಯ ಅವತಾರಗಳ ದರ್ಶನ. ನೀರು ಹರಿಯುವ ಶಬ್ದ ಜತೆಗೆ ತುಸು ಕತ್ತಲೆ, ಹೊನಲು ಬೆಳಕಿನ ತರಹದ ದೀಪಗಳು, ಅಲ್ಲಿನ ಇಂಪಾದ ಸಂಗೀತ ಭಕ್ತಿ ಹೆಚ್ಚಿಸುತಿತ್ತು. ಇತ್ತೀಚಿಗೆ ನಿರ್ಮಿಸಲಾದ ದೇವಾಲಯ ಇದಾಗಿದ್ದು, ತುಂಬಾ ಮನಸ್ಸಿಗೆ ಮುದ ನೀಡುತ್ತದೆ.
ನಾವು ಮದ್ಯಾನ್ಹದ ಭೋಜನ ವನ್ನು "ಕ್ರೀಡಾ ರೆಸಿಡೆನ್ಸಿ" ಹೋಟೆಲ್ ನಲ್ಲಿ ಮಾಡಿ ಸ್ವಲ್ಪ ವಿಶ್ರಮಿಸಿ ಬ್ರಂದಾವನದ ಮಂದಿರಗಳ ದರ್ಶನಕ್ಕೆ ಹೊರಟೆವು.
  • ರಂಗನಾಥ ದೇವಾಲಯ 
  • ಬಂಕಿ ಬಿಹಾರಿ ಮಂದಿರ 
  • ವಿಷ್ಣುವಿನ ದೇವಾಲಯ
  • ಪ್ರೇಮ ಮಂದಿರ 
  • ಹನುಮಾನ್ ಮಂದಿರ 
ಈ ದೇವಾಲಯಗಳನ್ನು ಸಂದರ್ಶಸಿದೆವು. ಈ ಮಂದಿರಗಳಲ್ಲದೆ ಇನ್ನೂ ಹತ್ತು ಹಲವಾರು ದೇವಾಲಯಗಳು ಅಲ್ಲಿನ ಸುತ್ತು ಮುತ್ತಲಲ್ಲಿ ಇವೆ. ಉಳಿದಂತೆ ಬಿರ್ಲಾ ಮಂದಿರ, ಇಸ್ಕಾನ್ ಮಂದಿರ ಪ್ರಮುಖವಾದವುಗಳು.

"ಬ್ರಂದಾವನ ದಲ್ಲಿ ಮಂಗಗಳಿದ್ದಾವೆ,
ಮಂಗಗಳಂತೆ ಬೆನ್ನ ಹಿಂದೆ ಬರುವ ಮಕ್ಕಳಿದ್ದಾರೆ,
ಮತ್ತೆ ಬೇತಾಳ ಗಳಂತೆ ಬೆಂಬಿಡದ ಮಾರ್ಗದರ್ಶಕರಿದ್ದಾರೆ
ಅಲ್ಲಲ್ಲಿ ಕಸ ಎಸೆಯುವ ಯಾತ್ರಿಕರಿದ್ದಾರೆ.
ಪ್ರೇಮ ಸುಧೆಯನ್ನು ಹರಿಸಿದ ಶ್ಯಾಮಸುಂದರ ಕೃಷ್ಣನ  ನಾಡಿಗೆ ಸ್ವಾಗತ ಸುಸ್ವಾಗತ"

ಮಾರ್ಗದರ್ಶನ  (ಗೈಡ್) ಮಾಡುತ್ತೇವೆ ಎಂದು ಬೆಂಬಿಡದ ಜನರಿಂದ ತಪ್ಪಿಸಿಕೊಂಡು ಅಲ್ಲಿಯೇ ಓರ್ವ ವ್ರದ್ದೆಯ ಕೈಯಲ್ಲಿ ಅಲ್ಲಿನ ಮಾರ್ಗಸೂಚಿ ಪುಸ್ತಕ ಖರಿದಿಸಿ ಮೇಲೆ ಬರೆದ ಮಂದಿರಗಳನ್ನು ಸಂದರ್ಶಿಸಿದೆವು. 
ಮಂಗಗಳು ಕೈಯಲ್ಲಿ ಇರುವ ವಸ್ತುಗಳನ್ನು ಕಿತ್ತುಕೊಂಡು ಓಡುತ್ತವೆ ಎಂದು ಅಲ್ಲಿನ ಕೆಲವೊಂದು ಜನ ತಿಳಿಸಿದ್ದರು.  ನಾವು ನೋಡುತ್ತಿರುವಂತೆಯೇ ಒಂದು ಗಡವ ಮಂಗ ಅಭಿಮಾನ್ ನ ಕನ್ನಡಕ  (specs) ಕಿತ್ತುಕೊಂಡು ಮನೆಯೊಂದರ ಮೇಲಕ್ಕೆ ಹಾರಿತು. ನನಗೆ ಏನು ಮಾಡಬೇಕು ಎಂದು ಗೊತ್ತಾಗಲಿಲ್ಲ. ಅಲ್ಲಿನ ಒಂದು ಅಂಗಡಿಯವ ನಮ್ಮ ಸಹಾಯಕ್ಕೆ ಬಂದ. ಆ ಮಂಗನಿಗೆ ಒಂದು ಕಡಲೆ ಪೊಟ್ಟಣ ತೋರಿಸಿ ಎಸೆದ ಮಂಗ ಅ ಪೊಟ್ಟಣ ಕ್ಯಾಚ್ ಹಿಡಿಯಲು ಪ್ರಯತ್ನಿಸಿ ಕನ್ನಡಕ ಕೆಳಗೆ ಹಾಕಿತು.
ಪ್ರೇಮ ಮಂದಿರ ದಲ್ಲಿ ನರ್ತಿಸುವ ನೀರಿನಲ್ಲಿ ಸುಂದರ ಬೆಳಕಿನ ಸಂಯೋಜನೆ ಮಾಡಿದ್ದಾರೆ. ಕೊಲ್ಲಿ ದೇಶಗಳಲ್ಲಿ ನಡೆಸುವ fire works ತರಹ ಮಾಡಿದ್ದರು. ನಮ್ಮೆಲ್ಲರಿಗೂ ತುಂಬಾ ಮುದ ತರಿಸಿತು



















 

ಕಾಮೆಂಟ್‌ಗಳಿಲ್ಲ: