ಬುಧವಾರ, ಸೆಪ್ಟೆಂಬರ್ 9, 2015

ಸುವರ್ಣ ತ್ರಿಭುಜ (Golden Triangle) ಪ್ರವಾಸದ ಕೆಲವೊಂದು ಜ್ಹಳಕುಗಳು

ಮೊದಲ ದಿನ

ನಾವು ಮುಂಜಾವಿನ  ನಾಲಕ್ಕು ಮೂವತ್ತಕ್ಕೆ ವಿಮಾನ ನಿಲ್ದಾಣದಿಂದ  ಹೊರಬಂದೆವು. ದೆಹಲಿಯಲ್ಲಿ ನಮ್ಮನ್ನು ಕರೆದುಕೊಂಡುಹೊಗಲಿಕ್ಕೆ ನಮ್ಮ ಪ್ರವಾಸದ ಸಾರಥಿ (driver ) ನಮಗಾಗಿ ತಮ್ಮ  ಬಿಳಿ ರಥದ (White Car ) ಜತೆಗೆ ಕಾದು ಕುಳಿತಿದ್ದರು. ಹೋಟೆಲ್ ನಲ್ಲಿ ನಮ್ಮ ಬ್ಯಾಗ್ ಬಿಟ್ಟು ಬೆಳಗಿನ ಚಹಕ್ಕಾಗಿ ಒಂದು ೨೪/೭ ಮಳಿಗೆ ಪ್ರವೆಶಿಸಿದೆವು. ಅಲ್ಲಿ ಕಾಫಿ ಹೀರಿ ಒಂದೆರಡು ಬಿಸ್ಕುತ್ತಿನ ಪೊಟ್ಟಣ ಖರೀದಿಸಿ ಮರಳಿ ಹೋಟೆಲ್ ಕಡೆ ಬಂದು ನಮ್ಮ ಮುಂಜಾವಿನ ದಿನಚರಿಗಳನ್ನು ಮುಗಿಸಿ ದೆಹಲಿಯ ಒಂದು ಪಕ್ಷಿನೋಟ ನಡೆಸಲು ಹೊರೆಟೆವು.

ಕೆಂಪು ಕೋಟೆಯ ಹೊರಾಂಗಣ ಮತ್ತು ಒಳಾಂಗಣ ವೀಕ್ಷಣೆಗೆ ತೆರಳಿದೆವು. ಸ್ವಾತಂತ್ರ್ಯ ದಿನದ ತಯಾರಿ ನಡೆಯುತ್ತಿದ್ದ ಕಾರಣ ಪೋಲಿಸ್ ಸೈನ್ಯ ಅಲ್ಲಿ ಪಹರೆ ನಡೆಸುತ್ತಿತ್ತು. ಕೆಂಪು ಕೋಟೆಯ ಪ್ರವೇಶಕ್ಕೆ ಎರಡು ದ್ವಾರಗಳು - ಲಾಹೋರ್ ಗೇಟ್ ಮತ್ತು ದೆಹಲಿ ಗೇಟ್ . ಒಂದು ಗೇಟ್ ಅನ್ನು ಸುರಕ್ಷಿತ ಕಾರಣಗಳಿಗಾಗಿ ಮುಚ್ಚಲಾಗಿತ್ತು.  ಹಾಗಾಗಿ ತೆರೆದಿದ್ದ ಗೇಟ್ ನಲ್ಲಿ ತುಸು ಹೆಚ್ಚಿಗೆ ಎನ್ನುವಸ್ಟು ಜನ ಜಂಗುಳಿ ಇತ್ತು.  ಪ್ರಧಾನ ಮಂತ್ರಿಗಳ ಭಾಷಣಕ್ಕಾಗಿ  ಗ್ಯಾಲರಿ ಕಟ್ಟುವ ಜನ ಸೇರಿದ್ದರು.
ಸುಮಾರು ಎರಡು ತಾಸು ಸುತ್ತಾಡಿದ ಬಳಿಕ ಹೊರಗೆ ಬಂದೆವು.

ಹೊರಕ್ಕೆ ಬಂದ ಬಳಿಕ ಅಲ್ಲಿಯೇ ಚಾಂದನಿ ಚೌಕದ ಸುತ್ತಾಟಕ್ಕೆ ಒಂದು ಸ್ಯೆಕಲ್ ರಿಕ್ಷಾ ಗೊತ್ತು ಮಾಡಿದೆವು,  ಸ್ಯೆಕಲ್ ರಿಕ್ಷಾ ಚಾಲಕ ಸಾದಾರಣ ೩೦-೩೫ ರ ತರುಣ , ಅವನು  ಪ್ಯಾಂಟ್ ಮತ್ತು ಬನಿಯನ್ ದರಿಸಿದ್ದ. ಪ್ಯಾಂಟ್ ಹರಿದಿತ್ತು, ಅವನು ಹೇಳಿದ ರೇಟ್ ಗೆ ಒಪ್ಪಿಕೊಂಡೆ ಅಂದ ಹಾಗೆ ಅವನು ಅಂತಹ ವಿಶೇಷ ಬೆಲೆ ಕೇಳಲಿಲ್ಲ. ಬಹುಶ ೧೫೦ ಅಥವಾ ೧೭೫ ಕೇಳಿರಬೇಕು.

ಅಲ್ಲಿನ ಬೆಳ್ಳಿಯ ಮತ್ತು ಬಂಗಾರದ ಸಾಮಗ್ರಿ ಮಾರುವ ಗಲ್ಲಿ, ಬಟ್ಟೆ ಅಂಗಡಿಯ ಗಲ್ಲಿ, ಪರಾಟ ಗಲ್ಲಿ ಎಲ್ಲ ಸುತ್ತಾಡಿಸಿದ, ಪರಾಟ ಗಲ್ಲಿಯಲ್ಲಿ ಅಲ್ಲಿನ ಪರಾಟ ಮತ್ತು ಲಸ್ಸಿ ಸವಿದೆವು. ನನ್ನ ಮಗನಿಗೆ ಲಸ್ಸಿಯ ರುಚಿ ನಾಲಿಗೆ ಹಿಡಿದುಕೊಂಡದ್ದು ಇಲ್ಲಿಯೆ. ಪ್ರತಿ ಸಲವು ಲಸ್ಸಿ ಬೇಕೆಂದು ವರಾತ ತೆಗೆಯಲಿಕ್ಕೆ ಹತ್ತಿದ್ದ. ಅಲ್ಲಿಯ ಜಾಮಾ ಮಸೀದಿಯ ಹೊರಾಂಗಣದ  ಒಂದೆರಡು ಛಾಯಾ ಚಿತ್ರ ತೆಗೆದು ಕೊಂಡೆವು.

ಅಂದ ಹಾಗೆ ನಾವು ಪರಾಟ ಸವಿಯುವಾಗ ನಮ್ಮ ರಿಕ್ಷಾ ಚಾಲಕ ಒಳಗೆ ಗಾಡಿ ತಂದರೆ ತಿರಿಗಿಸಲು ಸ್ವಲ್ಪ ಕಷ್ಟ ಎಂದು ಹೊರಗೆ ನಿಂತಿದ್ದ. ನಾನು ಅವನ ಫೋನ್ ಸಂಖ್ಯೆ ಕೇಳಲು ಮರೆತಿದ್ದೆ. ಪರಾಟದ ತಿಂದ ನಮಗೆ ಸ್ಯೆಕಲ್ ರಿಕ್ಷಾ ಎಲ್ಲಿ ಎಂದು ಹುಡುಕ ಬೇಕಾಯಿತು. ಅಲ್ಲಿನ ವಾಹನದ ಜಂಗುಳಿ ಎಲ್ಲಿ ಎಂದು ಹುಡುಕುವುದು? ಅಲ್ಲಿಯೇ ಹೋಗುತ್ತಿದ್ದ ಒಂದೆರಡು ಸ್ಯೆಕಲ್ ರಿಕ್ಷಾದವರು ನಮ್ಮ ಹಿಂದೆ ಬಂದು ಬಂದು ಕೇಳಲಿಕ್ಕೆ ಹತ್ತಿದ್ದರು. ಕಡಿಮೆಯಲ್ಲಿ ಕರೆದುಕೊಂಡು ಹೋಗುತ್ತೇವೆ ಹಾಗೆ ಹೀಗೆ ಎಂದು.  ಸುಮಾರು ಅರ್ದ ತಾಸು ಅಲ್ಲಿ ಇಲ್ಲಿ ಹುಡುಕಾಡಿದೆವು, ನಮಗೆ ಜೊತೆಗೆ ಸ್ವಲ್ಪ ಪಾಪ ಪ್ರಜ್ಞೆ ಕಾಡಲಿಕ್ಕೆ ಶುರು ಆಯಿತು. ಇಸ್ಟೆಲ್ಲಾ ತಿರುಗಿಸಿದ ಜನ ದುಡ್ಡು ತೆಗೆದುಕೊಳ್ಳದೆ ಹೋದನಲ್ಲ ಅಂತ. ಅಸ್ಟು ಹೊತ್ತಿಗೆ ನನ್ನ ಮಗನನ್ನು ನೋಡಿಯೋ ಅಥವಾ ನಮ್ಮನ್ನು ನೋಡಿಯೋ ಸವಾರ ಪ್ರತ್ಯಕ್ಷ ಆದ.

ನಮ್ಮನ್ನು ಪುನ ಪಾರ್ಕಿಂಗ್ ಗೆ ತಲುಪಿಸಿ ನಾನು ಕೊಟ್ಟ ಕ್ರಯವನ್ನು ಲೆಕ್ಕವೂ ಮಾಡದೇ ಕಿಸೆಗೆ ಹಾಕಿಕೊಂಡು ತನ್ನ ಮುಂದಿನ ಗ್ರಾಹಕನಿಗಾಗಿ ಹೊರಟೆ ಬಿಟ್ಟ.

ನಂತರ ನಾವು ಅಕ್ಷರ ಧಾಮ (ಸ್ವಾಮಿ ನಾರಾಯಣ) ಮಂದಿರ ದ ಕಡೆಗೆ ಹೊದೆವು. ತುಂಬಾ ಸುಂದರವಾಗಿ ಕಟ್ಟಿದ್ದಾರೆ , ಎತ್ತರವಾದ ಮಂದಿರ ಸ್ವಚವಾಗಿ ಇಟ್ಟಿದ್ದಾರೆ. ಸ್ವಾಮಿ ನಾರಾಯಣ ಎಂದರೆ ಸರಿ ಸುಮಾರು ೧೮ ನೆ ಶತಮಾನದ ಒಬ್ಬ ಯೋಗಿ (ನಮ್ಮ ನಾರಾಯಣ ಗುರು ಗಳ ಸಮಕಾಲಿನರೋ?) ಅಂತು ಜನರ ಭಕ್ತಿ ಮತ್ತು ಶ್ರದ್ದೆಗೆ ಮೆಚ್ಚ ಬೆಕು. ಅಲ್ಲಿ ಇದ್ದ ಹಾಗೆಯೇ ಸಣ್ಣದಾಗಿ ಮಳೆ ಹನಿಯಲು ತೊಡಗಿತು.
ಅಲ್ಲಿಂದ ಮುಂದೆ ನಾವು ರಾಜ್ ಘಾಟ್ ಮತ್ತು ಶಕ್ತಿ ಸ್ತಳ ದ ಕಡೆಗೆ ಸಾಗಿದೆವು. ರಾಜ್ ಘಾಟ್ (ಮಹಾತ್ಮಾ ಗಾಂಧಿಯ ಸಮಾಧಿ)
ನಲ್ಲಿ ಸಮಾದಿಯ ಹತ್ತಿರ ಬರಿಗಾಲಿನಲ್ಲಿ ಹೊಗಬೇಕು.
ಶಕ್ತಿ ಸ್ತಳ ದಲ್ಲಿ ಇಂದಿರ ಗಾಂಧಿ ಮತ್ತು ರಾಜೀವ್ ಗಾಂಧಿ ಯಾ ಸಮಾಧಿ ಇದೆ. ಶಾಂತಿವನ ದ ಪಕ್ಕದಲ್ಲಿ ಸಮಾಧಿ ಗಳನ್ನೂ ಕಟ್ಟಲಾಗಿದೆ.

ಹಾಗೆಯೆ ನಂತರ ಹುಮಾಯುನ್ ಗೋರಿ ನೋಡಲಿಕ್ಕೆ ತೆರಲಿದೆವು. (ನೋಡಲಿಕ್ಕೆ ದೇವಸ್ತಾನ ದ ಹಾಗೆ ಇದೆ.) ಈ ಮುಘಲರು ಏನು ಮಾಡಿದ್ದರು ಎಂದು ಚರಿತ್ರೆ ಸರಿಯಾಗಿ ನಮಗೆ ತಿಳಿಸುವುದಿಲ್ಲ

that is the end of our first day.

 

ಕಾಮೆಂಟ್‌ಗಳಿಲ್ಲ: